ಮಧೂರು: ಮಧೂರು ಸೇವಾ ಸಹಕಾರಿ ಬ್ಯಾಂಕ್‍ನ 2018-19 ನೇ ಆರ್ಥಿಕ ವರ್ಷದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಬ್ಯಾಂಕ್‍ನ ಅಧ್ಯಕ್ಷರಾದ ನಾರಾಯಣಯ್ಯ ಕೆ. ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಅಧ್ಯಕ್ಷರು ಮಾತನಾಡಿ 2018-19 ನೇ ಸಾಲಿನಲ್ಲಿ ಬ್ಯಾಂಕ್ ಒಟ್ಟು 95.45 ಕೋಟಿ ರೂ. ಗಳ ವ್ಯವಹಾರ ನಡೆಸಿದೆ. ಹಿಂದಿನ ಸಾಲಿನ ವ್ಯವಹಾರಕ್ಕಿಂತ 10 ಕೋಟಿ ರೂ. ಅಧಿಕವಾಗಿದೆ. ಬ್ಯಾಂಕ್‍ನ ಬಂಡವಾಳ 24.60 ಕೋಟಿ ಆಗಿದೆ. 2018-19 ನೇ ಸಾಲಿನಲ್ಲಿ ಬ್ಯಾಂಕ್ 18,67,071.23 ರೂ. ಲಾಭ ಗಳಿಸಿದೆ ಎಂದು ತಿಳಿಸಿದರು. 2018-19 ರ ಸಾಲಿನ ವರದಿ, ಜಮಾ ಖರ್ಚುಗಳ ವರದಿ ಪೂರಕ ಬಜೆಟ್, 2020-21 ರ ಬಜೆಟ್, ಲಾಭ ನಷ್ಟದ ವಿವರ ಆಸ್ತಿ-ಜವಾಬ್ದಾರಿ ವಿವರ, 2018-19 ರ ಲೆಕ್ಕ ಪರಿಶೋಧನೆಯ ನ್ಯೂನತೆ ಪರಿಹಾರ ಇತ್ಯಾದಿಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು.
2018-19 ರ ಸಾಲಿನಲ್ಲಿ ನಿಧನರಾದ ರಾಷ್ಟ್ರೀಯ, ರಾಜ್ಯ ನಾಯಕರಿಗೆ, ಬ್ಯಾಂಕ್ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಿರಿಯ ಸದಸ್ಯರೂ, ಬ್ಯಾಂಕ್‍ನ ಉತ್ತಮ ವ್ಯವಹಾರಗಾರರೂ, ಕೃಷಿಕರೂ ಆದ ಏರಿಕ್ಕಳ ಕೃಷ್ಣಯ್ಯ ಅವರನ್ನು ಗೌರವಿಸಲಾಯಿತು. ಎಸ್‍ಎಸ್‍ಎಲ್‍ಸಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗಳಿಸಿದ ಸದಸ್ಯ ಸುಕುಮಾರ ಕುದ್ರೆಪ್ಪಾಡಿ ಅವರ ಪುತ್ರಿ ಅಪರ್ಣ ಮತ್ತು ಅಂಜಲಿ ಚಂದ್ರ ಮಧೂರು ಅವರನ್ನು ನಗದು ಪುರಸ್ಕಾರ ಹಾಗು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸದಸ್ಯರಾದ ತಾರಾನಾಥ ಮಧೂರು, ಸುಕುಮಾರ ಕುದ್ರೆಪ್ಪಾಡಿ, ಚಂದ್ರಹಾಸ ಎಂ. ಮೊದಲಾದವರು ಮಾತಾನಾಡಿದರು. ಬ್ಯಾಂಕ್ ನಿರ್ದೇಶಕರಾದ ಸುಬ್ಬಣ್ಣ ನಾೈಕ್, ರಾಮ ಎ, ನೌಕರರಾದ ಬಿ.ಗಣೇಶ್, ರಂಜಿತ್‍ಎಚ್, ಹರಿಪ್ರಸಾದ್, ಶಶಿಧರ, ವಸಂತ ಕುಮಾರ್, ಡಿ.ಡಿ.ಏಜೆಂಟ್ ಸುಚಿತ್ರಾ, ಸೆಕ್ಯೂರಿಟಿ ಗೋಪಾಲ, ಗಣೇಶ್, ಶೋಭಲತಾ ಸಹಕರಿಸಿದರು.
ಮಹಿಳಾ ನಿರ್ದೇಶಕರಾದ ಶಾರದಾ ಎಸ್.ಎನ್.ಭಟ್ ಮತ್ತು ಅನುಪಮ ಪ್ರಾರ್ಥನೆ ಹಾಡಿದರು. ನಿರ್ದೇಶಕ ಸರ್ವೇಶ್ ಕುಮಾರ್ ವಂದಿಸಿದರು. ಮಧುಕರ ಕೆ.ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.