ಮುಳ್ಳೇರಿಯ: ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗಣಿತ ಅಧ್ಯಾಪಕನಾಗಿ ನೇಮಕಗೊಂಡ ಕನ್ನಡ ತಿಳಿಯದ ಅಧ್ಯಾಪಕ ಬುಧವಾರ ಶಾಲೆಗೆ ಹಾಜರಾಗಿದ್ದು, ಇದನ್ನು ಪ್ರತಿಭಟಿಸಿ ಕನ್ನಡ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಗುರುವಾರ ಶಾಲೆಯ ಕನ್ನಡ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದರು. ಕನ್ನಡ ಗಂಧಗಾಳಿ ಅರಿಯದ ಮಲಯಾಳಿ ಅಧ್ಯಾಪಕ ನೇಮಕವನ್ನು ಮಕ್ಕಳ ಹೆತ್ತವರೂ ಪ್ರತಿಭಟಿಸಿದರು.