ಕುಂಬಳೆ: ಪವಿತ್ರ ಶ್ರದ್ದಾ ಕೇಂದ್ರ ಶಬರಿಮಲೆಯ ಮೂಲ ಸ್ವರೂಪದ ಆಚಾರ ಅನುಷ್ಠಾನಗಳಿಗೆ ಸಂಬಂಧಪಟ್ಟು ಸಿಪಿಎಂ ಪಕ್ಷ ದ್ವಿಮುಖ ನೀತಿ ಬಹಿರಂಗಗೊಳ್ಳುತ್ತಿದೆ. ಅದು ತನ್ನ ಲಾಭಕ್ಕಾಗಿ ಸಂದರ್ಬೋಚಿತವಾಗಿ ಅಲ್ಲಲ್ಲಿಗೆ ಬೇಕಾದಂತೆ ತನ್ನ ನಿಲುವನ್ನು ಬದಲಾಯಿಸುವ ಗೋಸುಂಬೆತನವನ್ನು ಪ್ರದರ್ಶಿಸಿ ಜನವಂಚನೆಗೈಯ್ಯುತ್ತಿದೆ ಎಂÀು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಪ್ರಸ್ತುತ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯ ಹೊತ್ತಲ್ಲಿ, ಸಿಪಿಎಂನ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶಂಕರ ರೈ ಎಂ.ಅವರು ತಾವು ಮತಯಾಚನೆಯ ಸಮದರ್ಭ ಶಬರಿಮಲೆಯ ಮೂಲ ಆಚಾರ ಸಂರಕ್ಷಣೆಗೆ ಬದ್ದರಾಗಿರುವುದಾಗಿ ಪ್ರದಿಪಾದಿಸುತ್ತಿದ್ದು, ಆದರೆ ತಮ್ಮ ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಶಬರಿಮಲೆ ವಿರೋಧಿ ಹೇಳಿಕೆಯನ್ನು ಯಾಕೆ ಖಂಡಿಸುತ್ತಿಲ್ಲ ಎಮದು ಅವರು ಸುದ್ದಿಗೋಷ್ಠಿಯಲ್ಲಿ ಕೇಳಿದರು. ಎಡಪಕ್ಷಗಳ ಅಭ್ಯರ್ಥಿಗಳಿಗೆ ತಮ್ಮ ಪಕ್ಷದ ಮೇಲೆ ನಿಷ್ಠೆಯೋ ಅಥವಾ ತಮ್ಮ ವೈಯುಕ್ತಿಕ ನಂಬಿಕೆಯ ಮೇಲೆ ನಿಷ್ಠೆ ಇರುವುದೋ ಎನ್ನುವುದನ್ನು ಶಂಕರವ ರೈ ಎಂ.ಅವರು ಸ್ಪಷ್ಟಪಡಿಸಬೇಕು. ಮತದಾರರನ್ನು ವಂಚಿಸುವ ಕೊಡಿಯೇರಿ ಬಾಲಕೃಷ್ಣನ್ ಮತ್ತು ಶಂಕರ ರೈ ಎಂ. ಅವರ ಪ್ರತ್ಯೇಕ ಅಭಿಪ್ರಾಯಗಳನ್ನು ಪ್ರಜ್ಞಾವಂತ ನಾಗರಿಕರು ಅಳೆದು ತೂಗಬೇಕಾಗಿದೆ ಎಂದು ಶ್ರೀಕಾಂತ್ ತಿಳಿಸಿದರು. ಶಂಕರ ರೈ ಎಂ ಅವರಿಗೆ ತಾವೀಗ ವ್ಯಕ್ತಪಡಿಸುತ್ತಿರುವ ಶಬರಿಮಲೆ ಪರವಾದ ಹೇಳಿಕೆ ಈ ಹಿಂದೆ ಸ್ವಂತ ಪಕ್ಷ ಶಬರಿಮಲೆ ವಿರುದ್ದ ಹೇಳಿಕೆ-ನಿರ್ಧಾರಗಳನ್ನು ಕೈಗೊಂಡಾಗ ಯಾಕಿರಲಿಲ್ಲ. ಪಕ್ಷದ ಪರವಾಗಿ ಶಬರಿಮಲೆ ಸ್ತ್ರೀ ಪ್ರವೇಶದ ಪರ ಮಾತನಾಡಿದ ವ್ಯಕ್ತಿ ಇದೀಗ ಮತಗಳಿಕೆಗಾಗಿ ಹೇಳಿಕೆ ಬದಲಿಸಿ ವಂಚಿಸುತ್ತಿರುವುದು ಆಶಾಢಭೂತಿತನವಾಗಿದ್ದು, ಧರ್ಮ ವಿಶ್ವಾಸಿಗಳ ಕ್ಷಮೆ ಯಾಚಿಸಬೇಕು ಎಮದು ನ್ಯಾಯವಾದಿ ಶ್ರೀಕಾಂತ್ ಆಗ್ರಹಿಸಿದರು.
ಮಂಜೇಶ್ವರದಲ್ಲಿ ಮುಸ್ಲಿಂಲೀಗ್ ಮತ್ತು ಸಿಪಿಎಂ ಗೌಪ್ಯ ಒಳೊಪ್ಪಂದ ನಡೆಸಿದೆ. ಈ ಕಾರಸ್ಥಾನದ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಕಡೆಯಿಂದ ಇಮತಹ ವಂಚನೆಯ ಮಾತುಗಳು ಕೇಳಿಬರುತ್ತಿದೆ. ಸಿಪಿಎಂ ತನ್ನ ಅಸ್ವಿತ್ವದ ಉಳಿವಿಗೆ ದೈವ ವಿಶ್ವಾಸದ ಮುಖವಾಡ ಧರಿಸಿದ್ದು, ಕಾರ್ಯಸಾಧನೆಯ ಬಳಿಕ ಮತ್ತೆ ಮೂಲ ಸ್ವರೂಪಕ್ಕೆ ಮರಳುವುದು ಎಂದು ಶ್ರೀಕಾಂತ್ ಎಚ್ಚರಿಸಿದರು.
ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್, ರಾಜ್ಯ ಸಮಿತಿ ಮುಖಂಡರಾದ ವಿ.ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಉಪಸ್ಥಿತರಿದ್ದರು.