ಕಾಸರಗೋಡು: ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಅಹಿಂಸಾತ್ಮಕ ಹೋರಾಟದ ಚಿತ್ರಣಗಳನ್ನು ಪುನರಾವರ್ತಿಸುವ ಮೂಲಕ ಇಂದಿನ ತಲೆಮಾರು ಹಿಂದಿನ ದಿನಗಳನ್ನು ಸ್ಮರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಜಿಲ್ಲೆಯಲ್ಲಿ ಸೃಷ್ಟಿಸಲಾಗಿದೆ.
ಮಹಾತ್ಮಾಗಾಂಧಿಯವರ ನೇತೃತ್ವದಲ್ಲಿ ಸಾಬರ್ ಮತಿ ಆಶ್ರಮದಿಂದ ದಂಡಿಯಾತ್ರೆ ವರೆಗಿನ ಹೆಜ್ಜೆಗಾರಿಕೆ, ಉಪ್ಪಿನ ಸತ್ಯಾಗ್ರಹ ಇತ್ಯಾದಿಗಳನ್ನು ನಡೆಸಿದುದು ಮಕ್ಕಳಿಗೆ ಹೊಸ ಅನುಭವ ನೀಡಿದೆ.
ಗಾಂಧಿಜಯಂತಿ ಸಪ್ತಾಹ ಅಂಗವಾಗಿ ಜಿಲ್ಲಾ ವಾರ್ತಾ ಇಲಾಖೆ ಮತ್ತು ವೆಳ್ಳಿಕೋತ್ ಮಹಾಕವಿ ಪಿ.ಸ್ಮಾರಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಜಂಟಿ ವತಿಯಿಂದ ಈ ಕಾರ್ಯಕ್ರಮ ನಡೆದಿದೆ.
ಸ್ವಾತಂತ್ರ್ಯ ಹೋರಾಟಗಾರರಾದ ವಿದ್ವಾನ್ ಪಿ.ಕೇಳು ನಾಯರ್, ಮಹಾಕವಿ ಪಿ.ಕುಂ??ರಾಮನ್ ನಾಯರ್ ಅವರ ಕರ್ಮಭೂಮಿಯಾಗಿರುವ ಜಿಲ್ಲೆಯ ವೆಳ್ಳಿಕೋತ್ ಪ್ರದೇಶದಲ್ಲಿ ಮಹಾತ್ಮಾಗಾಂಧಧೀಜಿ ಅವರ 150ನೇ ಜನಮ್ಮ ವಾರ್ಷಿಕೋತ್ಸವ ಅಂಗವಾಗಿಯೂ ಈ ಸಮಾರಂಭ ನಡೆದಿರುವುದು ಅರ್ಥಪೂರ್ಣ ಎನಿಸಿದೆ.
150 ಮಂದಿ ಮಕ್ಕಳು ದಂಡಿಯಾತ್ರೆ ಮಾದರಿಯ ಮೆರವಣಿಗೆ (ಕಾಲ್ನಡಿಗೆ ಯಾತ್ರೆ) ಯಲ್ಲಿ ಭಾಗವಹಿಸಿದರು. ಸಾಬರ್ ಮತಿಯಿಂದ ಹೊರಟ ಸಂಕಲ್ಪದಲ್ಲಿ ಆರಂಭಗೊಂಡ ಮೆರವಣಿಗೆಯಲ್ಲಿ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ವೆಂಕಟೇಶ್ ಬಾಪೂಜಿ ಅವರ ವೇಷ ಧರಿಸಿ ಗಮನ ಸೆಳೆದರು. ಮೆರವಣಿಗೆಯಲ್ಲಿ ಬಿಳಿ ಉಡುಪು ಮತ್ತು ಗಾಂಧಿಟೊಪ್ಪಿಗೆಯನ್ನು ಧರಿಸಿ ಉಳಿದ ಮಕ್ಕಳು ಅವರನ್ನು ಅನುಸರಿಸಿದರು.
ಬಳಿಕ ನಡೆದ ಗಾಂಧಿ ಸದಸ್ (ಸಭೆ) ಕಾರ್ಯಕ್ರಮವನ್ನು ಸಾಹಿತಿ ಪಿ.ವಿ.ಕೆ. ಪನೆಯಾಲ್ ಉದ್ಘಾಟಿಸಿದರು. ಗಾಂಧಿ ಹಾಡುಗಳ ಮೂಲಕ ಸಂದೇಶ ಸಾರಿದ, ರಾಷ್ಟ್ರ-ರಾಜ್ಯ ಪ್ರಶಸ್ತಿ ವಿಜೇತ ಸಂಗೀತ ಶಿಕ್ಷಕ ವೆಳ್ಳಿಕೋತ್ ವಿಷ್ಣು ಭಟ್ ಅವರನ್ನು ಅಭಿನಂದಿಸಲಾಯಿತು. ಶಾಲೆಯ ಮುಖ್ಯಶಿಕ್ಷಕ ಟಿ.ಪಿ.ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಶಾಲೆಗೆ ವಿತರಿಸಲಾದ ಸ್ಮರಣಿಕೆಯನ್ನು ಮಕ್ಕಳಿಗೆ ಮತ್ತು ಮುಖ್ಯಶಿಕ್ಷಕರಿಗೆ ಹಸ್ತಾಂತರಿಸಿದರು. ವಿದ್ಯಾರ್ಥಿನಿ ಪದ್ಮಪ್ರಿಯಾ ಗಾಂಧಿಸ್ಮೃತಿ ನಡೆಸಿದರು. ಶಿಕ್ಷಕಿ ಪ್ರಿಯಾ ಎಸ್.ಕೆ. ಉಪಸ್ಥಿತರಿದ್ದರು. ಶಿಕ್ಷಕ ಕೆ. ಅನಿಲ್ ಕುಮಾರ್ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು. ಗಾಂಧಿ ಕವನಗಳ ಆಲಾಪನೆ ನಡೆಯಿತು.