ಬದಿಯಡ್ಕ: ಶ್ರೀ ಅಯ್ಯಪ್ಪ ಧರ್ಮಪ್ರಚಾರ ರಥಯಾತ್ರೆಗೆ ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಭವ್ಯ ಸ್ವಾಗತವನ್ನು ನೀಡಲಾಯಿತು. ನೂರಾರು ಭಕ್ತಾದಿಗಳು ಪಾಲ್ಗೊಂಡು ಅಯ್ಯಪ್ಪ ಜ್ಯೋತಿ ದರ್ಶನಗೈದರು. ನಡೆದ ಸಭಾಕಾರ್ಯಕ್ರಮದಲ್ಲಿ ಗುರುಸ್ವಾಮಿ ಕುಂಞÂಕಣ್ಣ ಮಣಿಯಾಣಿ ಅಧ್ಯಕ್ಷತೆಯನ್ನು ವಹಿಸಿದ್ದರು. ರಥಯಾತ್ರೆಯ ಸ್ವಾಗತ ಸಮಿತಿಯ ಜಿಲ್ಲಾ ಅಧ್ಯಕ್ಷ ಶಶಿಧರ ಶೆಟ್ಟಿ ಮಾತನಾಡಿ ಶಬರಿಮಲೆಯ ಆಚಾರ ಅನುಷ್ಠಾನಗಳ ಸಂರಕ್ಷಣೆಯ ಜನಜಾಗೃತಿಗಾಗಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಾಡಿನಾದ್ಯಂತ ಸನಾತನ ಸಂಸ್ಕøತಿ, ನಮ್ಮ ಪರಂಪರೆಯು ಮತ್ತೆ ವೈಭವಯುತವಾಗಬೇಕು ಎಂದು ಅವರು ತಿಳಿಸಿದರು.
ತಾಲೂಕು ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ.ಪಿ.ಸುರೇಶ್, ಮಂಡಲ ಅಧ್ಯಕ್ಷ ರವೀಂದ್ರ ನಾಥ ಶೆಟ್ಟಿ ವಳಮಲೆ, ಜನಪ್ರತಿನಿಧಿ ರಾಜೇಶ್ವರಿ ಮಾನ್ಯ, ಶ್ರೀಧರನ್ ಕೋಝಿಕ್ಕೋಡು, ಗೋಪಾಲಕೃಷ್ಣ ಪೈ ಬದಿಯಡ್ಕ, ನಾರಾಯಣ ಗುರುಸ್ವಾಮಿ ನೀರ್ಚಾಲು, ನ್ಯಾಯವಾದಿ ಗಣೇಶ್ ಬದಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಮಹೇಶ್ ವಳಕ್ಕುಂಜ ಸ್ವಾಗತಿಸಿ, ಗೋಪಾಲಕೃಷ್ಣ ಚುಕ್ಕಿನಡ್ಕ ವಂದಿಸಿದರು.