ಕುಂಬಳೆ: ಕೇರಳದ ಎಡರಂಗ ಸರ್ಕಾರ ದೇಶದ ರಾಜಕೀಯ ಚೌಕಟ್ಟಿಗೆ ಅವಮಾನ. ಜನತೆಯ ಬೇಡಿಕೆಗಳಿಗೆ ಸ್ಪಂದನೆ ನೀಡದ ಎಡರಂಗ ಸರ್ಕಾರ ಕೇರಳವನ್ನು ಅಧಪತನಕ್ಕೆ ತಳ್ಳುತ್ತಿದೆ. ಧಾರ್ಮಿಕ ನಂಬಿಕೆಗೆ ಸರ್ಕಾರದ ಬಲ ಉಪಯೋಗಿಸಿ ಧಾರ್ಮಿಕ ಆಚರಣೆಗೆ, ನಂಬಿಕೆಗೆ ಅವಮಾನ ಮಾಡಿದ ಎಡರಂಗ ಸರ್ಕಾರದ ಸೋಲು ಈ ದೇಶದ ದಾರ್ಮಿಕತೆಗೆ ಸಿಗುವ ಗೆಲುವು ಆಗಲಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಹೇಳಿದರು.
ಮಂಜೇಶ್ವರ ವಿಧಾಸಭಾ ಕ್ಷೇತ್ರಕ್ಕೆ ಅ.21 ರಂದು ನಡೆಯಲಿರುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿರುವ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಭಾನುವಾರ ಬಿಜೆಪಿ ಜನಪ್ರತಿನಿಧಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮುಸ್ಲಿಂ ಲೀಗ್ ಧಾರ್ಮಿಕ ಬೆದರಿಕೆ ಒಡ್ಡಿ ರಾಜಕೀಯ ದ್ರುವಿಕರಣ ಮಾಡಿ ರಾಜಕೀಯ ಮಾಡುತ್ತಿದೆ, ಇಲ್ಲಿಂದ ಗೆದ್ದ ಮುಸ್ಲಿಂ ಲೀಗ್ ಶಾಸಕರುಗಳ ಕೊಡುಗೆ ಎಂದರೆ ಕೇರಳದಲ್ಲಿಯೇ ಅಭಿವೃದ್ಧಿ ಯಲ್ಲಿ ಹಿಂದುಳಿದ ಮಂಡಲವಾಗಿ ಮಂಜೇಶ್ವರ ಬದಲಾಗಿದೆ. ಆದುದರಿಂದ ಅಭಿವೃದ್ಧಿಗಾಗಿ, ದೇಶದ ಪ್ರಧಾನಿ ಮೋದಿಯವರ ಕನಸು ನನಸು ಮಾಡಲು ಬಿಜೆಪಿ ಯನ್ನು ಗೆಲ್ಲಿಸುವ ಅಗತ್ಯ ಇದೆ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪಿ.ಕೆ. ಕೃಷ್ಣದಾಸ್ ಮೊದಲಾದವರು ಉಪಸ್ಥಿತರಿದ್ದರು. ಮಾಲತಿ ಸುರೇಶ್ ಸ್ವಾಗತಿಸಿ, ರೂಪವಣಿ ಆರ್.ಭಟ್ ವಂದಿಸಿದರು.