HEALTH TIPS

ಯುವ ಕವಯಿತ್ರಿ ಶ್ವೇತಾ ಕಜೆ ಅವರ ಸತ್ಯೊದ ಮೈಮೆ ಕಾದಂಬರಿ ಬಿಡುಗಡೆ

      ಬದಿಯಡ್ಕ:  ಬೊಳ್ಳಿ ಪ್ರಕಾಶನ ಸುರತ್ಕಲ್ ಇದರ ಆಶ್ರಯದಲ್ಲಿ ಯುವ ಕವಯಿತ್ರಿ ಶ್ವೇತಾ ಕಜೆ ಅವರ  ಸತ್ಯೊದ ಮೈಮೆ  ತುಳು ಕಾದಂಬರಿಯ ಬಿಡುಗಡೆ  ಕಾರ್ಯಕ್ರಮ ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ಬುಧವಾರ ಅತಿಥಿ ಗಣ್ಯರ ಸಮ್ಮುಖದಲ್ಲಿ ಜರಗಿತು.
    ಸಭಾ ಕಾರ್ಯಕ್ರಮವನ್ನು ಸ್ಚಾಮಿ ಕೃಪಾ ತರವಾಡಿನ ಕೊರಗಜ್ಜ ದೈವದ ಪಾತ್ರಿ ಕಿಶೋರ್ ಕುಮಾರ್ ಕನ್ನೆಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು.ಅವರು ಈ ಸಂದರ್ಭ ಮಾತನಾಡಿ ತುಳು ಭಾಷೆ, ಸಂಸ್ಕøತಿಯ ಬೆಳವಣಿಗೆಗಳಿಗೆ ಯುವ ತಲೆಮಾರು ತುಳು ಭಾಷೆಯ ಬರಹಗಳಲ್ಲಿ ಆಸಕ್ತರಾಗಬೇಕು ಎಂದು ತಿಳಿಸಿದರು.
     ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ತುಳು ಭಾಷೆಯ ವ್ಯಾಪಕ ಬೆಳವಣಿಗೆಗೆ ಪೂರಕವಾಗುವ ಸಾಹಿತ್ಯ ರಚನೆಗಳು ಇನ್ನಷ್ಟು ಪ್ರಕಟಗೊಳ್ಳಬೇಕು. ಜೊತೆಗೆ ಓದುಗರ ಸಂಖ್ಯೆಯೂ ವೃದ್ದಿಸಬೇಕು ಎಂದರು. ಆಧುನಿಕ ಮಾಧ್ಯಮಗಳನ್ನು ಸಮರ್ಪಕವಾಗಿ ಭಾಷೆ, ಸಂಸ್ಕøತಿಗಳ ಬೆಳವಣಿಗೆಯಲ್ಲಿ ಪರಿಣಾಮಕಾರಿಯಾಗಿ ಬಳಸುವುದರಿಂದ ಪೂರಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
     ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕ ಕುಞÂ್ಞರಾಮ ಮಣಿಯಾಣಿ.ಬಿ ಸತ್ಯೊದ ಮೈಮೆ ಕಾದಂಬರಿ ಪುಸ್ತಕವನ್ನು ಬಿಡುಗಡೆಗೊಳಿಸಿ ಹಾರೈಸಿದರು.
      ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಮಾಜಿ ಸದಸ್ಯೆ ವಿದ್ಯಾಶ್ರೀ ಎಸ್ ಉಳ್ಳಾಲ್ ಕೃತಿ ಪರಿಚಯ ನಡೆಸಿದರು. ಕೇರಳ ತುಳು ಅಕಾಡೆಮಿ ಸದಸ್ಯ,ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಮೌನ ಕೋಗಿಲೆ ಸಂವಾಹಕ ಸಮೂಹದ ಕಿಶೋರ್ ಎಕ್ಕಾರ್, ಬೊಳ್ಳಿ ಪ್ರಕಾಶನದ
ಸಂಗೀತಾ ಶರತ್ ಶೆಟ್ಟಿ ಸುರತ್ಕಲ್ ಸಭೆಯಲ್ಲಿ ಉಪಸ್ಥಿತರಿದ್ದರು.
    ಕೃತಿಕಾರ್ತಿ ಶ್ವೇತಾ ಕಜೆ ಸ್ವಾಗತಿಸಿ, ಕವಯಿತ್ರಿ ಚೇತನಾ ಕುಂಬ್ಳೆ ವಂದಿಸಿದರು. ಈ ಸಂದರ್ಭದಲ್ಲಿ ಪುಸ್ತಕಕ್ಕೆ ಮುಖ ಪುಟ ರಚಿಸಿದ ಚಿತ್ರಕಲಾವಿದ ಸುರೇಂದ್ರ ಪೆರ್ಲ, ಮುದ್ರಕರಾದ ರಾಮಚಂದ್ರ ಬಲ್ಲಾಳ್ ಮುಳ್ಳೇರಿಯ, ಪುಸ್ತಕ ಪ್ರಕಟಣೆಗೆ ಸಹಕಾರ ನೀಡಿದ ಮೌನ ಕೋಗಿಲೆ ವಾಟ್ಸಪ್ ಬಳಗ, ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದ ರಿತೇಶ್ ಕಿರಣ್ ಕಾಟುಕುಕ್ಕೆ ಅವರನ್ನು ಗೌರವಿಸಲಾಯಿತು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries