ಕಾಸರಗೋಡು: ಜಿಲ್ಲಾ ಸಮಾಜ ವಿಜ್ಞಾನ ಕ್ಲಬ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ವತಿಯಿಂದ ಚೆರ್ಕಳ ಮಾರ್ತೋಮಾ ಶಾಲೆಯಲ್ಲಿ ನಡೆಸಿದ ಜಿಲ್ಲಾ ಮಟ್ಟದ ವಾರ್ತಾ ವಾಚನ ಸ್ಪರ್ಧೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಬೇಕಲ ಸಬ್ ಜಿಲ್ಲೆಯ ನಿಖಿತಾ ಮೋಹನ್ ಪ್ರಥಮ ಬಹುಮಾನ ಪಡೆದಿದ್ದಾರೆ.
ಕಾಸರಗೋಡು ಸಬ್ ಜಿಲ್ಲೆಯ ಅಂಜನಾಕೆ.ನಾಯರ್ ದ್ವಿತೀಯ ಬಹುಮಾನ ಗಳಿಸಿದರು. ಪ್ರೌಢಶಾಲೆ ವಿಭಾಗದಲ್ಲಿ ಚಿತ್ತಾರಿಕಲ್ ಸಬ್ ಜಿಲ್ಲೆಯ ಮೇಘಾ ಥೆರೆಸಾ ಪ್ರಥಮಬಹುಮಾನ, ಚೆರುವತ್ತೂರು ಸಬ್ ಜಿಲ್ಲೆಯ ಪಿ.ವಿ.ನಂದನಾ ದ್ವಿತೀಯ ಬಹುಮಾನ ಪಡೆದರು. ಹೈಯರ್ ಸೆಕೆಂಡರಿ ಕನ್ನಡ ವಿಭಾಗದಲ್ಲಿ ಕಾಸರಗೋಡು ಸಬ್ ಜಿಲ್ಲೆಯ ಗೋಪಿಕಾ ಪ್ರಥಮ, ಕುಂಬಳೆ ಸಬ್ ಜಿಲ್ಲೆಯ ಶ್ವೇತಾ ಎಸ್.ದ್ವಿತೀಯ ಬಹುಮಾನ ಗಳಿಸಿದರು.
ಕಾಸರಗೋಡು ವಿಜಿಲೆನ್ಸ್ ಡಿ.ವೈ.ಎಸ್.ಪಿ. ಕೆ.ದಾಮೋದರನ್ ಬಹುಮಾನವಿತರಿಸಿದರು. ಮಾರ್ತೋಮ ಶಾಲೆಯ ಮುಖ್ಯಶಿಕ್ಷಕ ಸಕಾರಿಯಾ ಥಾಮಸ್ ಅಧ್ಯಕ್ಷತೆ ವಹಿಸಿದರು. ಮಹಾಲಿಂಗೇಶ್ವರ ಭಟ್, ಹರೀಶ್ ಪಂದಕ್ಕಲ್ ಉಪಸ್ಥಿತರಿದ್ದರು. ಸಮಾಜ ವಿಜ್ಞಾನ ಕ್ಲಬ್ ಜಿಲ್ಲಾ ಕಾರ್ಯದರ್ಶಿ ಮಧುಸೂದನನ್ ಸ್ವಾಗತಿಸಿದರು. ಚೆರುವತ್ತೂರು ಉಪಜಿಲ್ಲಾ ಕಾರ್ಯದರ್ಶಿ ದೇವದಾಸ್ ಎಂ.ವಂದಿಸಿದರು.