ಕುಂಬಳೆ: ಸುಮಾರು ಎರಡು ಶತಮಾನಗಳ ಹಳಮೆಯಿರುವ ಇಲ್ಲಿನ ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರವು ಐದು ವರ್ಷಗಳಿಗೊಮ್ಮೆ ನಡೆಯಲಿರುವ ನಡಾವಳಿ ಮಹೋತ್ಸವಕ್ಕೆ ಸಜ್ಜಾಗಿದೆ. ಶ್ರೀ ಕ್ಷೇತ್ರ ಬ್ರಹ್ಮಕಲಶೋತ್ಸವ ಹಾಗೂ ನಡಾವಳಿ ಮಹೋತ್ಸವವನ್ನು ಮುಂದಿನ ಫೆಬ್ರವರಿ ತಿಂಗಳ 27 ರಿಂದ ಮಾರ್ಚ್ ಒಂದರ ವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಬ್ರಹ್ಮಕಲಶೋತ್ಸವ ಹಾಗೂ ನಡಾವಳಿ ಮಹೋತ್ಸವವನ್ನು ಯಶಸ್ವಿಗೊಳಿಸಲು ಇತ್ತೀಚೆಗೆ ಜರಗಿದ ಕ್ಷೇತ್ರ ಆಡಳಿತ ಸಮಿತಿಯ ಹಾಗೂ ಊರ ಮಹನೀಯರ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಉತ್ಸವ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳಿಗೆ ರೂಪು ನೀಡಲಾಯಿತು. ಶ್ರೀ ಕ್ಷೇತ್ರ ಸಮಿತಿ ಅಧ್ಯಕ್ಷರಾಗಿರುವ ಬಿ. ಗೋಪಾಲ ಚೆಟ್ಟಿಯಾರ್ ಸಭೆಯ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಕೆ. ಪ್ರಭಾಕರ ಕೂಡ್ಲು ಅವರು ಸ್ವಾಗತಿಸಿ ಉತ್ಸವ ಬಗ್ಗೆ ಮಾಹಿತಿಯಿತ್ತರು. ಉಪಾಧ್ಯಕ್ಷರಾದ ಎಂ. ನಾರಾಯಣ, ರಾಮಚಂದ್ರ ತೊಕ್ಕೋಟು, ಕುಞÂಕೃಷ್ಣ ಮಾಸ್ತರ್, ಸದಾಶಿವ ಮವ್ವಾರು, ರವಿ ನಾಯ್ಕಾಪು ಮೊದಲಾದವರು ಮಾತನಾಡಿದರು. ಜೊತೆ ಕಾರ್ಯದರ್ಶಿ ದೇವದಾಸ ಕುಂಟಂಗೇರಡ್ಕ ವಂದಿಸಿದರು.
ಉತ್ಸವ ಸಮಿತಿಯ ಗೌರವ ಸಲಹೆಗಾರರಾಗಿ ಡಾ. ಕೆ. ನಾರಾಯಣ ಬೆಂಗಳೂರು, ಬಿ. ಶಂಕರ ದೇವಾಂಗ, ಶ್ರೀಧರ ಮಲಬಾರ್, ಡಾ. ಮಂಜುನಾಥ ಶೆಟ್ಟಿ, ಸರೋಜಿನಿ ಗೋವರ್ಧನ, ಬಿ. ಗೋಪಾಲ ಚೆಟ್ಟಿಯಾರ್ ಪೆರ್ಲ, ಕೆ. ಪ್ರಭಾಕರ ಕೂಡ್ಲು, ರಾಮಚಂದ್ರ ಸೋಮೇಶ್ವರ, ರಾಮಚಂದ್ರ ತೊಕ್ಕೋಟು, ಬಿ. ಗೋಪಾಲ ಮಾಸ್ತರ್ ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಡಾ. ಮೋಹನದಾಸ್ ಬೆಂಗಳೂರು, ಅಧ್ಯಕ್ಷರಾಗಿ ಪ್ರಮೋದ್ ಅತ್ತಾವರ, ಉಪಾಧ್ಯಕ್ಷರಾಗಿ ಶ್ರೀಧರ ಮನ್ನಿಪ್ಪಾಡಿ, ಗುಲಾಬಿ ಲಕ್ಷ್ಮಣ, ಪ್ರಧಾನ ಸಂಚಾಲಕರಾಗಿ ನ್ಯಾಯವಾದಿ ಎನ್. ಪದ್ಮನಾಭ, ಸಂಚಾಲಕರಾಗಿ ದಿನೇಶ ಕುಂಟಂಗೇರಡ್ಕ, ವೇಣುಗೋಪಾಲ, ಕೋಶಾಧಿಕಾರಿಯಾಗಿ ಸದಾಶಿವ ಮೌವ್ವಾರು ಅವರನ್ನು ಆರಿಸಲಾಯಿತು.
ವಿವಿಧ ಉಪಸಮಿತಿಗಳ ಅಧ್ಯಕ್ಷರು ಹಾಗೂ ಸಂಚಾಲಕರು: ಸ್ವಾಗತ- ಕುಞÂಕೃಷ್ಣ ಮಾಸ್ತರ್, ನ್ಯಾಯವಾದಿ ಗಣೇಶ ಬದಿಯಡ್ಕ. ಹಣಕಾಸು- ದೇವದಾಸ್.ಕೆ, ರಾಮಚಂದ್ರ ಬದಿಯಡ್ಕ, ನರೇಂದ್ರ ಬದಿಯಡ್ಕ. ವೈದಿಕ- ಎಂ. ನಾರಾಯಣ, ಭರತೇಶ. ಸಾಂಸ್ಕøತಿಕ- ರವಿ ನಾಯ್ಕಾಪು, ಸ್ನೇಹಲತಾ ದಿವಾಕರ್. ಕಚೇರಿ ನಿರ್ವಹಣೆ- ಬಿ.ಪಿ. ನಾರಾಯಣ, ಶ್ರೀಧರ ಅಂಬಿಕಾರೋಡ್. ಪ್ರಚಾರ- ಭಾಸ್ಕರ ಎನ್, ಪ್ರಮೋದ್. ಆಹಾರ- ಚಂದ್ರಶೇಖರ ಕುಂಟಂಗೇರಡ್ಕ, ದಯಾನಂದ ನಾಯ್ಕಾಪು. ಉಗ್ರಾಣ- ಕಿರಣ್, ಪುರುಷೋತ್ತಮ ಮಾಯಿಪ್ಪಾಡಿ, ನೀಲಕಂಠ. ಖರೀದಿ- ಸದಾಶಿವ ಮವ್ವಾರು, ದಿನೇಶ ಮನ್ನಿಪ್ಪಾಡಿ, ರಾಮ ಕೆ. ಧ್ವನಿ, ಬೆಳಕು ಮತ್ತು ಚಪ್ಪರ- ಉದಯ ನಾರಾಯಣಮಂಗಲ, ಅನಿಲ್ ನಾಯ್ಕಾಪು, ರಾಜೇಶ ಕುಂಟಂಗೇರಡ್ಕ. ಅಲಂಕಾರ- ಚರಣ್ ಕುಮಾರ್, ಗೋಪಾಲಕೃಷ್ಣ. ನೀರು ಸರಬರಾಜು ಮತ್ತು ಶುಚಿತ್ವ- ಸುರೇಂದ್ರ ಎನ್.ಎಸ್, ಉದಯ ದರ್ಬಾರ್‍ಕಟ್ಟೆ, ಶಶಿಧರ ನಾರಾಯಣಮಂಗಲ. ಮಹಿಳಾ ಸಮಿತಿ- ಸುನೇತ್ರಾ ಸುವರ್ಣ, ಸುಶೀಲಾ ಕೃಷ್ಣ, ಸುಲೋಚನಾ ರಾಮ, ಸಂಧ್ಯಾ ದಿನೇಶ್.
ಮುಂದೆ ಪ್ರತೀ ತಿಂಗಳ ಎರಡನೇ ಹಾಗೂ ನಾಲ್ಕನೇ ಭಾನುವಾರಗಳಂದು ಎಲ್ಲ ಸಮಿತಿಗಳ ಸಂಯುಕ್ತ ಸಭೆ ನಡೆಸಲು ತೀರ್ಮಾನಿಸಲಾಯಿತು.