ಕಾಸರಗೋಡು: ಮಹಾತ್ಮಾಗಾಂಧೀಜಿ ಅವರ 150ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಆರ್.ಕಣ್ಣನ್ ಅವರಿಗೆ ಗೌರವಾರ್ಪಣೆ ನಡೆಯಿತು.
ಹೊಸದುರ್ಗ ಜಿಲ್ಲಾ ಕಾರಾಗೃಹದಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಗೌರವಿಸಲಯಿತು. ಕೈದಿಗಳೊಂದಿಗೆ ಅವರು ಸಂವಾದ ನಡೆಸಿದರು. ಕಾರ್ಯಕ್ರಮ ಅಂಗವಾಗಿ ಕೈದಿಗಳಿಗೆ ಗಾಂಧೀಜಿ ಅವರಿಗೆ ಸಂಬಂಧಿಸಿ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಜಿಲ್ಲಾ ಕಾರಾಗೃಹ ವರಿಷ್ಠಾಧಿಕಾರಿ ಕೆ.ವೇಣು ಸ್ವಾಗತಿಸಿದರು. ಸಹಾಯಕ ವರಿಷ್ಠಾಧಿಕಾರಿ ಎಂ.ಶ್ರೀನಿವಾಸನ್, ಹರಿತ ಕೇರಳ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಹೆಚ್ಚುವರಿ ಜೈಲ್ ಅಧಿಕಾರಿ ವಿ.ರಾಜೀವನ್, ಸಹಾಯಕ ಜೈಲ್ ಅಧಿಕಾರಿ ಪಿ.ವಿ.ಸಜೀಷ್ ಮೊದಲಾದವರು ಉಪಸ್ಥಿತರಿದ್ದರು.