ಮಂಜೇಶ್ವರ: ತಲೇಕಳ ಶ್ರೀಸದಾಶಿವ ರಾಮ ವಿಠಲ ದೇಗುಲದಲ್ಲಿ ದೀಪಾವಳಿ ಉತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ಪರ್ವದ ಅಂಗವಾಗಿ ಶ್ರೀ ಕ್ಷೇತ್ರದ ಮೊಕ್ತೇಸರ ಹಾಗೂ ಪವಿತ್ರ ಪಾಣಿ ವೇದಮೂರ್ತಿ ಯಸ್.ವಾಸುದೇವ ಭಟ್ ಅವರ ನೇತೃತ್ವದಲ್ಲಿ ಪ್ರಾತ:ಕಾಲ ಹಾಗೂ ಮಧ್ಯಾಹ್ನ ಶ್ರೀ ಮಹಾಗಣಪತಿ, ಶ್ರೀ ರಾಮ ವಿಠಲ, ಶ್ರೀ ನಾಗ, ವನಶಾಸ್ತಾರ ದೇವರ ಸನ್ನಿಧಿಯಲ್ಲಿ ವಿಶೇಷ ಸೇವೆಗಳನ್ನು ಸಲ್ಲಿಸಿ ರಾತ್ರಿ ದೀಪಗಳನ್ನು ಬೆಳಗಿಸಲಾಯಿತು. ಪ್ರಧಾನ ಕ್ಷೇತ್ರಾಧಿಪತಿಯಾದ ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಫಲಾಭಿಷೇಕಗಳು, ರಜತ ಸ್ವರ್ಣ ಪುಷ್ಪಾದಿಗಳಿಂದ ಅಲಂಕರಿಸಿ ಪಾತ:ಕಾಲ ಮಧ್ಯಾಹ್ನ ವಿಶೇಷ ಸೇವೆಗಳೊಂದಿಗೆ ಮಹಾ ಪೂಜೆಯನ್ನು ಜರಗಿಸಲಾಯಿತು. ಸಂಧ್ಯಾ ಕಾಲದಲ್ಲಿ ಭಕ್ತರಿಂದ ಭಜನಾ ಸಂಕೀರ್ತನೆ, ಕಾರ್ತಿಕ ಪೂಜೆ ಹಾಗೂ ವಿಶೇಷ ಮಹಾ ಮಂಗಳಾರತಿ ನಡೆಯಿತು. ತುಳಸಿ ವೃಂದಾವನದಲ್ಲಿ ತುಳಸಿ ಪೂಜೆಯನ್ನು ಧಾರ್ಮಿಕ ಕ್ರಮಗಳಿಂದ ಆಚರಿಸಿ ದೀಪಗಳನ್ನು ಆಲಯ ಸುತ್ತು ಬೆಳಗಿಸಿ ಪೂಜಿಸಲಾಯಿತು. ಬಲೀಂದ್ರ ಪೂಜೆಯನ್ನು ಧಾನ್ಯಲಕ್ಷ್ಮಿ ಪೂಜೆಯನ್ನು ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೀಪಜ್ಯೋತಿಯನ್ನು ಬೆಳಗಿಸಿ ಕತ್ತಲೆಯನ್ನು ಹೋಗಲಾಡಿಸಿ ಬೆಳಕನ್ನು ನೀಡಿದಂತೆ ನಮ್ಮೆಲ್ಲರ ಜೀವನದಲ್ಲಿ ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ದೀಪವನ್ನು ಬೆಳಗಿಸಿ ಕೊಡಬೇಕೆಂದು ಪರಮಾತ್ಮನಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿ ಬಲೀಂದ್ರನನ್ನು ಕೂಗಿ ಕರೆಯಲಾಯಿತು.
ತಲೇಕಳ ಶ್ರೀ ಸದಾಶಿವ ರಾಮ ವಿಠಲ ದೇಗುಲದಲ್ಲಿ ದೀಪಾವಳಿ ಉತ್ಸವ
0
ಅಕ್ಟೋಬರ್ 31, 2019