HEALTH TIPS

ಪೆರಿಯಾ ಅವಳಿ ಕೊಲೆ ಆರೋಪಿಗಳಿಗೆ ಭದ್ರತೆ ಒದಗಿಸಿದವರನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು-ಮುಲ್ಲಪಳ್ಳಿ ರಾಮಚಂದ್ರನ್


     ಉಪ್ಪಳ: ಜಿಲ್ಲೆಯಲ್ಲಿ ಭಾರೀ ಆತಂಕ ಮೂಡಿಸಿದ್ದ ಪೆರಿಯಾ ಕಳ್ಯೊಟ್ಟು ಪ್ರದೇಶದ ಯುವ ಕಾಂಗ್ರೆಸ್ ಕಾರ್ಯಕರ್ತರಾದ  ಕೃಪೇಶ್ ಹಾಗೂ ಶರತ್‍ಲಾಲ್ ಅವರ ಕೊಲೆ ಪ್ರಕರಣಕ್ಕೆ ಆರೋಪಿಗಳಿಗೆ ಸಂರಕ್ಷಣೆ ನೀಡುವ ನಿಟ್ಟಿನಲ್ಲಿ  ಪೆÇೀಲಿಸರು ಪ್ರಕರಣದ ದಾರಿ ತಪ್ಪಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಕೊಲೆ ಪ್ರಕರಣದ ಆರೋಪಿಗಳನ್ನು ರಾಜ್ಯದ ಉನ್ನತ ಸಿಪಿಎಂ  ನಾಯಕರ ಮಾರ್ಗದರ್ಶನದಂತೆ ರಕ್ಷಿಸಲಾಗುತ್ತಿದ್ದು, ಪ್ರಕರಣವನ್ನು ತಕ್ಷಣ ಸಿಬಿಐ ತನಿಖೆಗೆ ಒಳಪಡಿಸಿ ಸಮಗ್ರ ತನಿಖೆ ನಡೆಸಬೇಕೆಂದು ಕೇರಳ ಪ್ರದೇಶ ಕಾಂಗ್ರೆಸ್ಸ್ (ಕೆಪಿಸಿಸಿ) ಅಧ್ಯಕ್ಷ ಮಲ್ಲಪಳ್ಳಿ ರಾಮಚಂದ್ರನ್ ಅಭಿಪ್ರಾಯಪಟ್ಟಿದ್ದಾರೆ.
    ಮಂಜೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಘೋಷಣೆಯಾಗಿರುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಎಂ.ಸಿ.ಕಮರುದ್ದೀನ್ ಅವರ ಪರ ಪ್ರಚಾರಾರ್ಥ  ಜಿಲ್ಲೆಯ ಭೇಟಿಯಲ್ಲಿರುವ ಅವರು ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ಯುಡಿಎಫ್ ಚುನಾವಣಾ ಕೇಂದ್ರ ಕಛೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ರಾಜ್ಯದಲ್ಲಿ ಕಳಪೆ ಗುಣಮಟ್ಟದ ಆಡಳಿತವನ್ನು ನೀಡುತ್ತಿರುವ ಎಲ್‍ಡಿಎಫ್ ಸರಕಾರ ಇದೀಗ ಕುತಂತ್ರದಿಂದ ಆಡಳಿತವನ್ನು ಉಳಿಸಿಕೊಳ್ಳಲು  ಪ್ರಯತ್ನಿಸುತ್ತಿದೆ. ಎಡರಂಗ ಬಿಜೆಪಿಯ ಜೊತೆಗೂಡಿ ಅನೈತಿಕ ಸಂಬಂಧದ ಮೂಲಕ ಮತಗಳನ್ನು ಪಡೆಯುವಲ್ಲಿ ತೊಡಗಿಸಿಕೊಂಡಿದೆ.  ಪಾಲ ಕ್ಷೇತ್ರದ  ಉಪಚುನಾವಣೆಯಲ್ಲಿ ಅವರ ಈ ಕುತಂತ್ರ ಫಲಿಸಿರುವುದೇ ಅಲ್ಲಿ ಯುಡಿಎಫ್ ಸೋಲಿಗೆ ಕಾರಣವಾದರೂ, ಇದೀಗ ನಡೆಯುತ್ತಿರುವ ರಾಜ್ಯದ
5 ಮಂಡಲಗಳಲ್ಲಿ ಯುಡಿಎಫ್ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಮತದಾರರು ಅವರ ಕುತಂತ್ರಗಳಿಗೆ ಬಲಿಯಾಗುವುದನ್ನು ತಪ್ಪಿಸಬೇಕಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮಾತ್ರ ಯುಡಿಎಫ್ ಜನರಲ್ಲಿ ಮತಗಳನ್ನು ಆಶಿಸುತ್ತಿದೆ ಎಂದು ಅವರು ತಿಳಿಸಿದರು.
     ಮಂಜೇಶ್ವರ ಎಡರಂಗ ಅಭ್ಯರ್ಥಿ ಸಿಪಿಎಂ ವೇಷ ಧರಿಸಿದ ಆರ್‍ಎಸ್‍ಎಸ್ ಕಾರ್ಯಕರ್ತನಾಗಿದ್ದು, ಪಕ್ಷದ ನಿಲುವಿಗೆ ವಿರುದ್ಧವಾದ ಅವರ ಹೇಳಿಕೆಗಳಿಗೆ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ತರಿಸಬೇಕಾಗಿದೆ. ಶಬರಿಮಲೆ ವಿಚಾರ ಈ ಬಾರಿ ಉಪಚುನಾವಣೆಯ ಮುಖ್ಯ ಪಾತ್ರವಹಿಸುತ್ತಿದ್ದು, ಮಂಜೇಶ್ವರದಲ್ಲಿ ಎಡರಂಗ ಅಭ್ಯರ್ಥಿ  ರಾಜ್ಯ ಸರ್ಕಾರದ  ವಿರುದ್ಧ ಅಭಿಪ್ರಾಯಗಳನ್ನು ಮಂಡಿಸಿರುವುದು ಅವರಿಗೆ ಪಕ್ಷದ ಬಗೆಗಿರುವ ಅನೈಕತೆಯನ್ನು ಎತ್ತಿ ತೋರಿಸುತ್ತದೆ. ಮಾತ್ರವಲ್ಲ ಎಲ್‍ಡಿಎಫ್ ಆಡಳಿತದ ವ್ಯಾಮೋಹಗಳಿಗೆ ಯಾವ ಮಟ್ಟಕ್ಕೂ ಇಳಿಯುತ್ತದೆ ಎನ್ನುವುದನ್ನು  ತಿಳಿಸುತ್ತದೆ ಎಂದು ಅವರು ಹೇಳಿದರು.
     ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಲೀಗ್ ರಾಜ್ಯ ಖಜಾಂಚಿ ಸಿ.ಟಿ.ಅಹಮ್ಮದಾಲಿ, ಯುಡಿಎಫ್ ಉಪಚುನಾವಣಾ ಸಮಿತಿ ಅಧ್ಯಕ್ಷ, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಹಕೀಂ ಕುನ್ನಿಲ್, ಯುಡಿಎಫ್ ಜಿಲ್ಲಾಧ್ಯಕ್ಷ ಎ. ಗೋವಿಂದನ್, ಯುಡಿಫ್ ಮಂಡಲಾಧ್ಯಕ್ಷ ಟಿ.ಎ.ಮೂಸಾ, ಮುಖಂಡರಾದ ಮಂಜುನಾಥ್ ಆಳ್ವ ಮಡ್ವ, ಮುಸ್ಲಿಂಲೀಗ್ ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಅಬ್ಬಾಸ್, ಪಿ.ಎ.ಅಶ್ರಫ್ ಅಲಿ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries