ಬದಿಯಡ್ಕ: ಕ್ರಿಯೇಟಿವ್ ಆಟ್ರ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ಸಿ.ಇ.ಟಿ, ನೀಟ್, ಜೆ.ಇ.ಇ ತರಗತಿಗಳನ್ನು ಪ್ರಾರಂಭಿಸುವ ಪೂರ್ವಭಾವಿಯಾಗಿ ಮುಂಬಯಿಯ ಹಿರಿಯ, ನುರಿತ ಪ್ರಾಧ್ಯಾಪಕರಿಂದ ಉಚಿತ ಒರಿಯೆಂಟೇಶನ್ ಕಾರ್ಯಕ್ರಮ ಜರಗಿತು.
ಮುಂಬಯಿಯ ಖ್ಯಾತ ರಸಾಯನ ಶಾಸ್ತ್ರ ತಜ್ಞ ಡಾ. ರಾಜೀವ್ ಪಂಡಿತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖ್ಯಾತ ಭೌತಶಾಸ್ತ್ರ ಪ್ರವೀಣ ಪ್ರೊ. ಆರ್.ಕೆ ಭಟ್ ಮಾತನಾಡಿ ಸರಳವಾಗಿ ವಿದ್ಯಾರ್ಥಿಗಳಿಗೆ ಮನಸ್ಸಿನಲ್ಲಿ ನಿಲ್ಲುವಂತೆ ನಾವು ಕಳೆದ ಮೂವತ್ತು ವರುಷಗಳಿಂದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗೆ ಭೋದನೆಯನ್ನು ಮಾಡುತ್ತಿದ್ದೇವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಕಾಲೇಜಿನ ಆಡಳಿತ ಟ್ರಸ್ಟಿ ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೂಡ ಪಟ್ಟಣದ ವಿದ್ಯಾರ್ಥಿಗಳೊಂದಿಗೆ ಮುಂದೆ ಸಾಗಬೇಕೆಂಬ ಹಂಬಲದಿಂದ ಈ ಕೋರ್ಸುಗಳನ್ನು ಪ್ರಾರಂಭಿಸಿದ್ದೇವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಶಿವದಾಸ್ ಸಿ.ಎಚ್., ಉಪಪ್ರಾಂಶುಪಾಲ ರವಿರಾಜ್, ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಅಭಿಯಂತರ, ಉದ್ಯಮಿ ಶ್ರೀಧರ ಭಟ್ ಕೊಟ್ಟಂಗುಳಿ ನಿರೂಪಿಸಿದರು.