ಕಾಸರಗೋಡು: ಅದಮಾರು ಮಠ ಉಡುಪಿ ಹಿರಿಯ ಯತಿಗಳಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರ ಆಶೀರ್ವಾದಗಳೊಂದಿಗೆ ಅ.4 ರಂದು ಪರ್ಯಾಯದ ಪೂರ್ವಭಾವಿಯಾಗಿ ಕೇರಳದಲ್ಲಿ ಪರ್ಯಟನೆಯಲ್ಲಿರುವ ಅದಮಾರು ಮಠ ಉಡುಪಿ ಕಿರಿಯ ಯತಿಗಳಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದಂಗಳವರು ಕಾಸರಗೋಡು ನಗರದ `ಈಶಾವಾಸ್ಯಂ'ಗೆ ಚಿತ್ತೈಸಿದರು.
ಬೆಳಗ್ಗಿನ ಪೂಜೆ ಬಳಿಕ ಪಾದಪೂಜೆ ಜರಗಿತು. ಉದ್ಯಮಿ ರಾಂ ಪ್ರಸಾದ್ ದಂಪತಿಗಳು ಅವರು ಪಾದಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ಪ್ರಕಾಶ್ ಪೆಜತ್ತಾಯ, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಭಕ್ತಾದಿಗಳು, ಈಶಾವಾಸ್ಯಂ ಮನೆಯವರು ಮೊದಲಾದವರು ಉಪಸ್ಥಿತರಿದ್ದರು.
ಭೇಟಿಯ ವೇಳೆ ಶ್ರೀ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ ನಡೆಯಿತು.