ಪೆರ್ಲ:ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಂಗಳವಾರ ಕುಂಬಳೆ ಉಪ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವಕ್ಕೆ ಚಾಲನೆ ನೀಡಲಾಯಿತು.
ಶಾಲಾ ವ್ಯವಸ್ಥಾಪಕ ಸೋಮಶೇಖರ ಜೆ.ಎಸ್.ಧ್ವಜಾರೋಹಣ ನೆರವೇರಿಸಿ ಕಲೋತ್ಸವಕ್ಕೆ ಚಾಲನೆ ನೀಡಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ., ಹೈಯರ್ ಸೆಕೆಂಡರಿ ವಿಭಾಗ ಪ್ರಭಾರ ಪ್ರಾಂಶುಪಾಲ ವಿಜಯಲಕ್ಷ್ಮಿ, ಕಲೋತ್ಸವ ಸಂಚಾಲಕ ಶ್ರೀಶ ಕುಮಾರ್, ಶೇಣಿ ಶ್ರೀ ಶಾರದಾಂಬ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಜೆ.ಎಸ್., ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ವಿಲ್ಸನ್ ಡಿಸೋಜ, ಕಾರ್ಯಕ್ರಮ ನಿರ್ವಾಹಕರಾದ ಶಾಸ್ತ ಕುಮಾರ್, ನಿರ್ಮಲ್ ಕುಮಾರ್, ಗುರುಮೂರ್ತಿ, ರವಿ ಮಾಸ್ತರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಉಪಜಿಲ್ಲೆಯ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಅಧ್ಯಾಪಕರು, ಸಂಘ ಸಂಸ್ಥೆ, ಸಂಘಟನೆ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಅ.29ರಿಂದ ನ.2ರವರೆಗೆ ನಡೆಯಲಿರುವ 5ದಿನಗಳ ಕಲೋತ್ಸವದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು ಕುಂಬಳೆ ಉಪ ಜಿಲ್ಲೆಯ ನೂರಕ್ಕಿಂತಲೂ ಮಿಕ್ಕಿದ ಶಾಲೆಗಳ ಆರು ಸಾವಿರದಷ್ಟು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.ಕಲೋತ್ಸವದ ಸಭಾ ಕಾರ್ಯಕ್ರಮದ ಉದ್ಘಾಟನೆ ಬುಧವಾರ ಸಂಜೆ ನಡೆಯಿತು.