ಕುಂಬಳೆ: ಕುಂಬಳೆ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಮಠದಲ್ಲಿ 4ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ಅ.6ರಿಂದ 8ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಈ ಸಂದರ್ಭ ಲೋಕ ಕಲ್ಯಾಣಾರ್ಥ ಗಣಪತಿ ಹವನ, ದುರ್ಗಾ ಹೋಮ, ಸರ್ವೈಶ್ವರ್ಯ ಪೂಜೆ, ದುರ್ಗಾನಮಸ್ಕಾರ ಪೂಜೆ, ಮೇಧಾ ಸರಸ್ವತಿ ಹವನ ನಡೆಯಲಿದೆ. 6ರಂದು ಬೆಳಿಗ್ಗೆ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿ ಪಾದಪೂಜೆ, ಸಾಮೂಹಿಕ ಪ್ರಾರ್ಥನೆ, ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 7ರಿಂದ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ದಿವ್ಯ ಉಪಸ್ಥಿತರಿರುವರು. ಎಸ್.ಜಗನ್ನಾಥ ಶೆಟ್ಟಿ ಕುಂಬಳೆ ಅಧ್ಯಕ್ಷತೆ ವಹಿಸುವರು. ಹಿಂದೂ ಐಕ್ಯವೇದಿಕೆ ಕೇರಳ ರಾಜ್ಯಾಧ್ಯಕ್ಷೆ ಶಶಿಕಲಾ ಟೀಚರ್ ಧಾರ್ಮಿಕ ಭಾಷಣ ಮಾಡುವರು. ಈ ವೇಳೆ ಬ್ರಹ್ಮಶ್ರೀ ಶ್ರೀನಾಥ ಭಟ್, ದೈವ ನರ್ತಕ ಡಾ.ರವೀಶ ಪರವ ಪಡುಮಲೆ, ಕ್ಯಾಂಪೆÇ್ಕೀ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಅವರನ್ನು ಗೌರವಿಸಲಾಗುವುದು. 8ರಿಂದ ಸುರೇಶ್ ಯಾದವ್ ಮುಳ್ಳೇರಿಯಾ ಅವರಿಂದ ಮಿಮಿಕ್ರಿ ಪ್ರದರ್ಶನ ನಡೆಯಲಿದೆ. ಅ.7ರಂದು ಬೆಳಿಗ್ಗೆ 8.30ಕ್ಕೆ ಪೂಜೆ, ಮೇಧಾ ಸರಸ್ವತಿ ಹವನ ಆರಂಭ, ಮಹಾಪೂಜೆ, ವಿವಿಧ ತಂಡಗಳಿಂದ ಭಜನಾ ಸತ್ಸಂಗ, ಸಂಜೆ 5ರಿಂದ ಲಲಿತಾ ಸಹಸ್ರನಾಮ ಪಾರಾಯಣ, ಸಾಮೂಹಿಕ ಸರ್ವೈಶ್ವರ್ಯ ಪೂಜೆ, ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. 8ರಂದು ಬೆಳಿಗ್ಗೆ 8ರಿಂದ ದುರ್ಗಾಹೋಮ, ವಿದ್ಯಾರಂಭ, ಮಹಾಪೂಜೆ, ಪ್ರಸಾದ ವಿತರಣೆ, ಸರಸ್ವತಿ ವಿಸರ್ಜನೆ ನಡೆಯಲಿದೆ.