ನವದೆಹಲಿ: ಪಾಕಿಸ್ತಾನ ಜೊತೆಗಿನ ವೈಮಾನಿಕ ಸಂಘರ್ಷದ ವೇಳೆ ಫೆ.27 ರಂದು ಹೆಲಿಕಾಪ್ಟರ್'ನ್ನು ನಮ್ಮದೇ ಕ್ಷಿಪಣಿಯು ತಪ್ಪಾಗಿ ಹೊಡೆದುರುಳಿಸಿದ್ದು, ಇದು ನಾವು ಮಾಡಿದ ದೊಡ್ಡ ತಪ್ಪು ಎಂದು ಭಾರತೀಯ ವಾಯುಪಡೆ ಶುಕ್ರವಾರ ಹೇಳಿದೆ.
ಕಳೆದ ಫೆಬ್ರವರಿ ತಿಂಗಳಿನಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ವೈಮಾನಿಕ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ಭಾರತೀಯ ಹೆಲಿಕಾಪ್ಟರ್ ಪತನಗೊಂಡಿದ್ದು. ಹೆಲಿಕಾಪ್ಟರ್ ಪತನಗೊಂಡಿದ್ದರ ಹಿಂದೆ ಸಾಕಷ್ಟು ಗೊಂದಲ ಹಾಗೂ ಅನುಮಾನಗಳು ಸೃಷ್ಟಿಯಾಗಿತ್ತು. ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಪತವಾಗಿರಬಹುದು ಅಥವಾ ಪಾಕಿಸ್ತಾನದ ಕ್ಷಿಪಣಿ ದಾಳಿಯಲ್ಲಿ ಪತನವಾಗಿರಬಹುದು ಎಂದು ಹೇಳಲಾಗುತ್ತಿತ್ತು. ಇದೀಗ ಹೆಲಿಕಾಪ್ಟರ್ ಪತನಗೊಂಡಿದ್ದರ ರಹಸ್ಯ ಬಹಿರಂಗಗೊಂಡಿದೆ.
ತನಿಖೆ ಮುಕ್ತಾಯಗೊಂಡಿದೆ. ಹೆಲಿಕಾಪ್ಟರ್'ನ್ನು ನಮ್ಮದೇ ಕ್ಷಿಪಣಿಯು ತಪ್ಪಾಗಿ ಹೊಡೆದುರುಳಿಸಿದೆ. ಇಬ್ಬರು ಅಧಿಕಾರಿಗಳ ವಿರುದ್ಧ ಈಗಾಗಲೇ ನಾವು ಕ್ರಮ ಕೈಗೊಂಡಿದ್ದೇವೆ. ಇದು ನಮ್ಮ ದೊಡ್ಡ ತಪ್ಪು ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಇಂತಹ ತಪ್ಪುಗಳು ಭವಿಷ್ಯದಲ್ಲಿ ಎಂದೂ ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆಂದು ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭಡೂರಿಯಾ ಅವರು ಹೇಳಿದ್ದಾರೆ. ಸಮರಕ್ಕೆ ತೆಗೆದುಕೊಂಡು ಹೋಗುವ ಪ್ರತೀ ಹೆಲಿಕಾಪ್ಟರ್ ನಲ್ಲಿಯೂ ಶತ್ರು ಅಥವಾ ಮಿತ್ರ ಗುರುತು ಪತ್ತೆ ಮಾಡುವ ಸಾಧನ (ಐಎ???ಫ್) ಇರುತ್ತದೆ. ಆದರೆ, ಪಾಕಿಸ್ತಾನದೊಂದಿಗೆ ಫೆ.27ರಕಂದು ನಡೆದ ವೈಮಾನಿಕ ಸಂಘರ್ಷದ ಸಂದರ್ಭದಲ್ಲಿ ಪತನಗೊಂಡಿದ್ದ ಹೆಲಿಕಾಪ್ಟರ್ ನಲ್ಲಿ ಈ ಸಾಧನವನ್ನು ಸ್ವಿಚ್ ಆಫ್ ಮಾಡಲಾಗಿತ್ತು. ಹೆಲಿಕಾಪ್ಟರ್ ಸಿಬ್ಬಂದಿಗೆ ಸೂಚನೆಗಳ್ನು ನೀಡುವ ಗ್ರೌಂಡ್ ಸ್ಟ್ಯಾಫ್'ಗೆ ಸರಿಯಾಗಿ ಸಂವಹನ ಸಾಧ್ಯವಾಗಿಲ್ಲ.
ಏರ್ ಡಿಫೆನ್ಸ್ ರಾಡಾರ್ ಗಳು ಆಗಸದಲ್ಲಿ ಸಾಗುವ ಯಾವುದೇ ವಸ್ತುಗಳನ್ನು ಪತ್ತೆ ಹಚ್ಚುತ್ತದೆ. ಆದರೆ, ಆ ವಸ್ತುಗಳು ಶತ್ರುಗಳದ್ದು ಅಥವಾ ಇಲ್ಲ ಎಂಬುದನ್ನು ಐಎ???ಪ್ ಸಾಧನದ ಮೂಲಕ ಪತ್ತೆ ಹಚ್ಚಲು ಸಹಾಯವಾಗುತ್ತದೆ. ಈ ಐಎ ಸ್ ಎ ಫ್ ಸಾಧನವನ್ನು ಆಫ್ ಮಾಡಿದ್ದರಿದಾಗಿ ಹೆಲಿಕಾಪ್ಟರ್ ಶತ್ರುವಿನದ್ದು ಎಂದು ತಪ್ಪಾಗಿ ಗ್ರಹಿಸಿ ಕ್ಷಿಪಣಿ ಮೂಲಕ ಹೊಡೆದುರುಳಿಸಲಾಗಿದೆ ಎಂಬ ಅಂಶವು ತನಿಖಾ ವರದಿಯಲ್ಲಿ ತಿಳಿದುಬಂದಿದೆ.