ಮಧೂರು: ಮೈಸೂರಿನ ಕೇಂದ್ರ ಚುಟುಕು ಸಾಹಿತ್ಯ ಪರಿಷತ್ತು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಸಹಕಾರದಲ್ಲಿ ಇತ್ತೀಚೆಗೆ ನಡೆದ 5ನೇ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಮಕ್ಕಳ ಚುಟುಕು ಕವಿಗೋಷ್ಠಿ ಹಾಗೂ ಹಿರಿಯರ ಚುಟುಕು ಕವಿಗೋಷ್ಠಿ ಸಮಾಜದ ವಿವಿಧ ಅವ್ಯವಸ್ಥೆಗಳನ್ನು ಕುಟುಕಿ, ನಗೆಯುಕ್ಕಿಸಿ, ಚಿಂತನೆಗೆ ಅವಕಾಶ ನೀಡಿದುವು.
ಸುಮಾರು 2 ಗಂಟೆಗಳ ಕಾಲ ನಡೆದ ಚುಟುಕು ಕವಿಗೋಷ್ಠಿಯಲ್ಲಿ ಕೇರಳ ಹಾಗೂ ಕರ್ನಾಟಕದಿಂದ ಆಗಮಿಸಿದ ಸುಮಾರು 40ಕ್ಕೂ ಮಿಕ್ಕಿದ ಕವಿಗಳು ಸ್ವರಚಿತ ಚುಟುಕು ವಾಚನ ಮಾಡಿದರು. ಪೆರಿಯ ಕೇರಳ ಕೇಂದ್ರೀಯ ವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ. ಸ್ವಾಮಿ.ನ. ಕೋಡಿಹಳ್ಳಿ ಹಿರಿಯರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕಾಟುಕುಕ್ಕೆಯ ಸೃಷ್ಟಿ ಕೆ ಶೆಟ್ಟಿ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಕರ್ನಾಟಕದ ಗೀತಾ ಮಂಜು ದಾವಣಗೆರೆ, ಡಾ. ಜಯಶ್ರೀ ಬಿ ಕದ್ರಿ, ವಿದ್ಯಾಧರ ರಾವ್, ಎಂ ಪಿ ಬಶೀರ್ ಮಹಮ್ಮದ್ ಬಂಟ್ವಾಳ, ಶಾಂತಾ ಪುತ್ತೂರು, ಹಮೀದ್ ಹಸನ್, ಜಯಾನಂದ ಪೆರಾಜೆ, ಡಾ. ಸುರೇಶ್ ನೆಗಳಗುಳಿ, ರಾಮಕೃಷ್ಣ ಸುಳ್ಯ ಮೊದಲಾದವರು ಹಾಗೂ ಕಾಸರಗೋಡು ಜಿಲ್ಲೆಯ ವೆಂಕಟ್ ಭಟ್ ಎಡನೀರು, ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್, ವಿಜಯರಾಜ್ ಪುಣಿಂಚಿತ್ತಾಯ, ವಸಂತ ಕುಮಾರ್ ಕೊಡ್ಲಮೊಗರು, ಬಾಲಕೃಷ್ಣ ಕೆ ಎಸ್ ಬೇಕೂರು, ಸುಭಾಶ್ ಪೆರ್ಲ, ಪ್ರಭಾವತಿ ಕೆದಿಲಾಯ ಪುಂಡೂರು, ಚಂದ್ರಿಕಾ ಶೆಣೈ, ಸೌಮ್ಯಗುರು ಕಾರ್ಲೆ, ಪ್ರಮೀಳಾ ರಾಜ್ ಚುಳ್ಳಿಕ್ಕಾನ, ರಿತೇಶ್ ಕಿರಣ್ ಕಾಟುಕುಕ್ಕೆ, ಶ್ವೇತಾ ಕಜೆ, ಶಶಿಕಲಾ ಕುಂಬಳೆ, ನರಸಿಂಹ ಭಟ್ ಏತಡ್ಕ, ಆನಂದ ರೈ ಅಡ್ಕಸ್ಥಳ, ಜ್ಯೋತ್ಸ್ನಾ ಎಂ.ಕಡಂದೇಲು, ಸುಶೀಲಾ ಕೆ ಪದ್ಯಾಣ, ನಿರ್ಮಲಾ ಶೇಷಪ್ಪ ಖಂಡಿಗ, ರವೀಂದ್ರನ್ ಪಾಡಿ ಮೊದಲಾದವರು ಭಾಗವಹಿಸಿದ್ದರು. ಚುಟುಕು ಗೋಷ್ಠಿಯಲ್ಲಿ ಕೌಟುಂಬಿಕ, ಸಾಮಾಜಿಕ, ರಾಜಕೀಯ ಮೊದಲಾದ ಅನೇಕ ವಿಚಾರಗಳ ಕುರಿತಾದ ಚುಟುಕಗಳು ಪ್ರಸ್ತುತಗೊಂಡುವು. ಕಾಸರಗೋಡು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಿರಾಜ್ ಅಡೂರು ಕಾರ್ಯಕ್ರಮ ನಿರೂಪಿಸಿದರು. ಕವಿಗೋಷ್ಠಿಯಲ್ಲಿ ಶಿವರಾಮ ಕಾಸರಗೋಡು, ಜಗದೀಶ್ ಕೂಡ್ಲು, ಶ್ರೀಕಾಂತ್ ಕಾಸರಗೋಡು ಸಹಕರಿಸಿದರು.