ಲಕ್ನೊ: ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನವೆಂಬರ್ 17ರಂದು ಅಂತಿಮ ತೀರ್ಪು ನೀಡಲಿದೆ. ಈ ಸಂದರ್ಭದಲ್ಲಿ ಭದ್ರತೆಯ ವಿಚಾರವಾಗಿ ನವೆಂಬರ್ ತಿಂಗಳ ಎಲ್ಲಾ ಕಾರ್ಯಕ್ರಮಗಳನ್ನು ಮತ್ತು ಕಾರ್ಯಕರ್ತರ ಎಲ್ಲಾ ಪ್ರವಾಸಿ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ರದ್ದುಗೊಳಿಸಿದೆ.
ಅಯೋಧ್ಯೆ ಕೇಸಿನ ತೀರ್ಪಿನ ವಿಚಾರದಲ್ಲಿ ಆರ್ ಎಸ್ ಎಸ್ ತೀವ್ರ ಜಾಗ್ರತೆಯಿಂದಿದ್ದು ತೀರ್ಪಿನ ಬಳಿಕ ಏನಾದರೂ ಘಟನೆಗಳು ನಡೆದರೆ ತಮ್ಮ ಮೇಲೆ ಆರೋಪ ಹೊರಿಸಬಾರದು ಎಂಬ ಮುನ್ನೆಚ್ಚರಿಕೆಯನ್ನು ಸಂಘಟನೆ ಹೊಂದಿದೆ. ಸುಪ್ರೀಂ ಕೋರ್ಟ್ ನ ತೀರ್ಪಿನ ಹಿನ್ನಲೆಯಲ್ಲಿ ನಾಳೆಯಿಂದ ನವೆಂಬರ್ 4ರವರಗೆ ನಡೆಯಲಿದ್ದ ಪ್ರಮುಖ ಸಭೆಯನ್ನು ಕೂಡ ಆರ್ ಎ???ಸ್ ರದ್ದುಗೊಳಿಸಿದೆ. ಇದರಲ್ಲಿ ಆರ್ ಎಸ್ ಎಸ್ ಮತ್ತು ಬಿಜೆಪಿಯ ಪ್ರಮುಖ ನಾಯಕರೆಲ್ಲರೂ ಭಾಗವಹಿಸುವುದರಲ್ಲಿದ್ದರು.