ಮಂಜೇಶ್ವರ: ಪಾತೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೀ ಪ್ರೈಮರಿ ತರಗತಿ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಉದ್ಘಾಟನಾ ಸಮಾರಂಭದ ಸವಿ ನೆನಪಿಗಾಗಿ ಶಾಲಾ ಪರಿಸರದಲ್ಲಿ ಎರಡು ಗಿಡಗಳನ್ನು ನೆಡಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ದೈಗೋಳಿ ಸಾಯಿ ನಿಕೇತನ ಸೇವಾಶ್ರಮದ ಆಡಳಿತ ಟ್ರಸ್ಟಿ ಡಾ.ಉದಯ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ಅಭಿವೃದ್ಧಿಯಲ್ಲಿ ಶಿಕ್ಷಕರು ರಕ್ಷಕರು ಪ್ರಧಾನ ಪಾತ್ರ ವಹಿಸಿ ಕೆಲಸ ಮಾಡಿದಾಗ ಮಕ್ಕಳ ಕಲಿಕಾ ಸಾಮಥ್ರ್ಯ ಹೆಚ್ಚಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಪಾತೂರು ಶಾಲೆ ತುಂಬಾ ಉತ್ತಮ ಕೆಲಸ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಳಿಕ ಜಯಂತ ಮಾಸ್ತರ್ ಕೊಡುಗೆಯಾಗಿ ನೀಡಿದ ಗುರುತು ಚೀಟಿಗಳನ್ನು (ಐ.ಡಿ.ಕಾರ್ಡ್‍ಗಳನ್ನು) ಪುಟಾಣಿಗಳಿಗೆ ತೊಡಿಸಿ ಅವರನ್ನು ಅಭನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬ್ಲಾಕ್ ಸಂಪನ್ಮೂಲ ಕೇಂದ್ರದ ತರಬೇತುದಾರ ಗುರು ಪ್ರಸಾದ್ ರೈ ಅವರು ಪ್ರೀ ಪ್ರೈಮರಿ ತರಗತಿ ಪ್ರಾರಂಭ ಮಾಡಿದ ಶಾಲಾ ಅಧಿಕೃತರನ್ನು ಅಭಿನಂದಿಸಿ ಮಾತನಾಡಿದರು. ಇದೊಂದು ಈ ಶಾಲೆಯ ಇತಿಹಾಸದಲ್ಲಿ ಮೈಲುಗಲ್ಲೆಂದು ಬಣ್ಣಿಸಿದರು. ಪ್ರೀ ಮ್ರೈಮರಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅತೀ ಅಗತ್ಯವೆಂದರು. ಶಿಕ್ಷಣದಲ್ಲಿ ಶಾಲೆಯ ಸಾಧನೆ ಕಾರ್ಯಕ್ರಮದ ಅಚ್ಚುಕಟ್ಟುತನವನ್ನೂ ವಿವರಿಸಿದರು. ಮಕ್ಕಳ ಸಂಖ್ಯೆಯ ಹೆಚ್ಚಳದ ಲೆಕ್ಕಾಚಾರವನ್ನು ರಕ್ಷಕರ ಮುಂದಿಟ್ಟರು.
ತರಬೇತುದಾರ ಕೃಷ್ಣ ಪ್ರಕಾಶ್ ಅವರು ಮಾತನಾಡಿ ನಾನು ಈ ಶಾಲೆಗೆ ಆಗಾಗ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ. ಇಲ್ಲಿ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ, ಐ.ಟಿ.ಆಧಾರಿತ ಶಿಕ್ಷಣ, ಉಲ್ಲಾಸ ಗಣಿತ ಇತ್ಯಾದಿ ಎಲ್ಲಾ ವಿಷಯಗಳಲ್ಲಿ ಮಕ್ಕಳು ಆಸಕ್ತಿ ವಹಿಸಿ ಕಲಿಯವಂತೆ ಮಾಡಲಾಗುತ್ತಿದೆ ಅದಕ್ಕೆ ಬೇಕಾದ ಈ ಶಾಲೆಯಲ್ಲಿ ಸಮುದಾಯ ಕ್ಷಮತೆಯ ಕಾರ್ಯವೈಖರಿ ಸ್ತುತ್ಯರ್ಹವಾದುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಡ್ತಿ ಹೊಂದಿ ವರ್ಗಾವಣೆಗೊಂಡ ಅರೆಬಿಕ್ ಟೀಚರ್ ಝೀನ ಮೋಲ್ ಅವರನ್ನು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ದಿನ ವೇತನ ಆಧಾರದಲ್ಲಿ ದುಡಿದ ಆಯಿಷತ್ ಸೈನಾಜ್ ಟೀಚರ್ ಅವರಿಗೂ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು.
ನಂತರ ಮಕ್ಕಳಿಂದ ಕಿರು ನಾಟಕ, ಮನೋರಂಜನಾ ಕಾರ್ಯಕ್ರಮ ನಡೆಯಿತು. ಮಾತೃಸಂಘದ ಅಧ್ಯಕ್ಷೆ ರೇವತಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಬು ಗಟ್ಟಿ ಶುಭ ಹಾರೈಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಬ್ದುಲ್ ಅಜೀಜ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಪದ್ಮನಾಭ ಮಾಸ್ತರ್ ಸ್ವಾಗತಿಸಿ, ಉಸ್ಮಾನ್ ಮಾಸ್ತರ್ ವಂದಿಸಿದರು. ಜಯಂತ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.