ಕಾಸರಗೋಡು: ಮಂಜೇಶ್ವರ ಉಪ ಚುನಾವಣೆ ಸಂಬಂಧ ಮಾದರಿ ನೀತಿಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜಾತಿ-ಮತ-ಭಾಷೆ ಹಿನ್ನೆಲೆಯಲ್ಲಿ ಜನತೆಯ ನಡುವೆ ದ್ವೇಷ ಹುಟ್ಟಿಸುವಂಥಾ ರೀತಿ ವರ್ತಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಜಾತಿ-ಮತಗಳ ಹೆಸರಲ್ಲಿ ಮತಯಾಚನೆ ನಡೆಸುವುದು, ಮತಯಾಚನೆಗೆ ಆರಾಧನಾಯಲಗಳ ಬಳಕೆ ನಡೆಸಕೂಡದು. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತದಾರರನ್ನು ಬೆದರಿಸಿ, ಆಮಿಷವೊಡ್ಡಿ ತಮ್ಮ ಕಡೆ ಸೆಳೆಯಕೂಡದು. ಒಬ್ಬರ ಬದಲಿಗೆ ಇನ್ನೊಬ್ಬರನ್ನು ಬಳಸಿ ಮತದಾನ ನಡೆಸುವುದು, ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮತದಾದ ದಿನ ಪ್ರಚಾರ ನಡೆಸುವುದು, ಮತದಾನಕ್ಕೆ 48 ತಾಸು ಮುನ್ನ, ಚುನಾವಣೆಯ ಪ್ರಚಾರ ಮುಗಿದ ನಂತರ, ಮತದಾನ ಮುಗಿಯುವ ಮುನ್ನ, ಸಾರ್ವಜನಿಕ ಸಭೆ ನಡೆಸುವುದು ಇತ್ಯಾದಿ ಮಾದರಿ ನೀತಿಸಂಹಿತೆಯ ಉಲ್ಲಂಘನೆಯಾಗಿದೆ ಎಂದವರು ಹೇಳಿದರು.
ಯಾವ ನಾಗರಿಕನ ಸಮಾಧಾನಕರ ಬದುಕಿನಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಸ್ತಕ್ಷೇಪ ನಡೆಸಕೂಡದು. ಯಾವುದೇ ವ್ಯಕ್ತಿಯ, ಸಂಸ್ಥೆಯ ಸ್ವಾಮ್ಯದ ಕಟ್ಟಡ, ಜಾಗ, ಆಸ್ತಿಯಲ್ಲಿ ಸಂಬಂ`Àಪಟ್ಟವರ ಒಪ್ಪಿಗೆ, ಮಾಹಿತಿಯಿಲ್ಲದೆ ಪ್ರಚಾರ ಸಾಮಾಗ್ರಿ ಬಳಸಕೂಡದು ಎಂದವರು ಹೇಳಿದರು.
ಪ್ರತಿಪಕ್ಷದ ಅಭ್ಯರ್ಥಿ ನಡೆಸುವ ಪ್ರಚಾರ ಚಟುವಟಿಕೆಗಳಿಗೆ ತಡೆಯುಂಟುಮಾಡುವುದು, ಅವರ ಪ್ರಚಾರ ಸಾಮಾಗ್ರಿಗಳಿಗೆ ಹಾನಿ ಮಾಡುವುದು ಇತ್ಯಾದಿ ಮಾದರಿ ನೀತಿಸಂಹಿತೆಯ ಉಲ್ಲಂಘನೆ ಎಂದು ತಿಳಿಸಿದರು.
ಅಭ್ಯರ್ಥಿಗಳು ಚುನಾವಣೆ ಸಭೆ, ವಾಹನ ಪ್ರಚಾರ ಇತ್ಯಾದಿ ನಡೆಸುವ ವೇಳೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯಬೇಕು. ಧ್ವನಿವರ್ಧಕ ಬಳಸಿ ನಡೆಸುವ ಪ್ರಚಾರ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆ ವರೆಗಿನ ಅವಧಿಯಲ್ಲಿ ಅನುಮತಿ ರಹಿತವಾಗಿದೆ. ಸರಕಾರಿ ಸಂಸ್ಥೆಗಳು, ಸರಕಾರಿ ಕಾರ್ಯಕ್ರಮಗಳು ಚುನಾವಣೆ ಪ್ರಚಾರಕ್ಕಾಗಿ ಬಳಸಕೂಡದು. ಸರಕಾರಿ, ಸಾರ್ವಜನಿಕ ಸಂಸ್ಥೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಚಾರ ಸಾಮಾಗ್ರಿಗಳ ಬಳಕೆ ನಡೆಸಕೂಡದು.
ಜಿಲ್ಲೆಯಲ್ಲಿ ಸುಗಮ, ನ್ಯಾಯ ಪೂರ್ವಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ನೀತಿ ಸಂಹಿತೆ ಜಾರಿಗೊಳಿಸುವ ಸಂಬಂಧ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಪೆÇಲೀಸ್ ಸಂರಕ್ಷಣೆ ಸಹಿತದ ವೀಡಿಯೋ ಚಿತ್ರೀಕರಣ ಸಹಿತದ ಆ್ಯಂಟಿ ಡಿ ಫೇಸ್‍ಮೆಂಟ್ ಸ್ಕ್ವಾಡ್ ರಚನೆಯಾಗಿದೆ. ಸ್ಕ್ವಾಡ್‍ಗಳ ಚಟುವಟಿಕೆ ನಿರೀಕ್ಷಿಸುವ ನಿಟ್ಟಿನಲ್ಲಿ, ಆದೇಶ ನೀಡುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅ„ಕಾರಿಯೊಬ್ಬರನ್ನು ನೇಮಿಸಲಾಗಿದೆ. ಚುನವಣೆ ನೀತಿಸಂಹಿತೆ ಸಂಬಂಧ ಚಟುವಟಿಕೆಗಳ ಒಟ್ಟು ಹೊಣೆ ಹೆಚ್ಚುವರಿ ದಂಡಾಧಿಕಾರಿ ಅವರಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.