ಬದಿಯಡ್ಕ: ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವತಿಯಿಂದ ನಡೆಯುತ್ತಿರುವ ಅಭಿಯಾನ ರಂಗಸಿರಿ ದಸರಾ ಯಕ್ಷಪಯಣದ ಎರಡನೇ ದಿನದ ಕಾರ್ಯಕ್ರಮವು ಮಡ್ಯಾರಿನ ಶ್ರೀ ಪರಾಶಕ್ತಿ ದೇವಸ್ಥಾನದಲ್ಲಿ ನಡೆಯಿತು. ಪ್ರಧಾನ ಅರ್ಚಕ ಗಜಾನನ ಭಟ್ ದೀಪೋಜ್ವಲನೆ ಮಾಡಿ ಸಂಸ್ಥೆಯನ್ನು ಹರಸಿದರು. ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು, ರಂಗಸಿರಿಯ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ನಂದ ಕಿಶೋರ್ ಮವ್ವಾರು, ಉಪಾಸನಾ ಪಂಜರಿಕೆ, ಅಭಿಜ್ಞಾ ಬಿ ಭಟ್, ಕಿಶನ್ ಅಗ್ಗಿತ್ತಾಯ, ಮನೀಶ್ ವಳಮಲೆ, ಸಂದೇಶ್ ಅರ್ತಿಪಳ್ಳ, ಶ್ರೀಜಾ ಉದನೇಶ್, ಸೂರಜ್, ಶ್ರೀಶ ಕುಮಾರ ಪಂಜಿತ್ತಡ್ಕ, ಆನಂದ, ಆಕಾಶ್ ಬದಿಯಡ್ಕ, ವಿದ್ಯಾ ಕುಂಟಿಕಾನಮಠ ಮತ್ತು ಧನೀಶ್ ಕುಂಡಂಗುಳಿ, ಸುಧಾಕರ, ಸೌಜನ್ಯ ಮಂಜನಾಡಿ, ಸುಜಾತ ಪಾತ್ರಗಳಲ್ಲಿ ಮಿಂಚಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಪುರುಷೋತ್ತಮ ಭಟ್ ನಿಡುವಜೆ ಹಾಗೂ ವಾಸುದೇವ ಕಲ್ಲೂರಾಯ ಮಧೂರು, ಚೆಂಡೆಯಲ್ಲಿ ರೋಹಿತ್ ಉಚ್ಚಿಲ, ಮದ್ದಳೆಯಲ್ಲಿ ಕೃಷ್ಣರಾಜ ಭಟ್ ನಂದಳಿಕೆ, ಚಕ್ರತಾಳದಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಸಹಕರಿಸಿದರು. ಕೇಶವ ಆಚಾರ್ಯ ಕಿನ್ಯ, ಮೋಹನ ಕೊಕ್ಕರ್ಣೆ, ಗಿರೀಶ ಕುಂಪಲ ನೇಪಥ್ಯದಲ್ಲಿ ಸಹಕರಿಸಿದರು.