ಕಾಸರಗೋಡು: ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನೊತ್ತಿದ ಕವಿ, ಸಾಹಿತಿ, ವಿಮರ್ಶಕ, ಪತ್ರಕರ್ತ ಎಂ.ಗಂಗಾಧರ ಭಟ್ ಅವರ ಕುರಿತಾಗಿನ ಸಾಧನೆಗಳು ಮುಂದಿನ ತಲೆಮಾರಿಗೆ ಹಸ್ತಾಂತರಗೊಳ್ಳಲು ಅವರ ಬದುಕು-ಬರಹ ಸಂಶೋಧನೆಗಳಾಗಬೇಕು. ಅವು ಕೃತಿ ರೂಪದಲ್ಲಿ ಹೊರ ಬರಬೇಕು ಎಂದು ಸಾಹಿತಿ, ವಿದ್ವಾಂಸ, ಸಂಶೋಧಕ ಡಾ.ಯು.ಶಂಕರನಾರಾಯಣ ಭಟ್ ಅವರು ಹೇಳಿದರು.
ಸಾಮಾಜಿಕ, ಸಾಂಸ್ಕøತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನ ಎಂ.ಗಂಗಾಧರ ಭಟ್ ವೇದಿಕೆಯಲ್ಲಿ ಆಯೋಜಿಸಿದ ಎಂ.ಗಂಗಾಧರ ಭಟ್ ನುಡಿನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಖ್ಯಾತ ಕವಿಯಾಗಿ, ವಿಮರ್ಶಕರಾಗಿ, ಪತ್ರಕರ್ತರಾಗಿ, ಪ್ರಾಧ್ಯಾಪಕರಾಗಿ, ಕನ್ನಡ ಹೋರಾಟಗಾರರಾಗಿ ಅವರು ಸಲ್ಲಿಸಿದ ಕೊಡುಗೆ ಅಪಾರ. „ೀಮಂತ ವ್ಯಕ್ತಿತ್ವದ ಅವರ ಬದುಕು ಬರಹ ಮುಂದಿನ ತಲೆಮಾರಿಗೆ ಪ್ರೇರಣೆಯಾಗಬೇಕು. ಅವರ ಸಾಧನೆಗಳು ಅಕ್ಷರಗಳಲ್ಲಿ ಮೂಡಿಬರಬೇಕು. ಈ ಮೂಲಕ ಯುವ ತಲೆಮಾರು ಅವರ ಸಾಧನೆಗಳನ್ನು ಮನನ ಮಾಡಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಅಧ್ಯಾಪಕ ನಾರಾಯಣನ್ ಪೆರಿಯ ಮತ್ತು ಅಧ್ಯಾಪಕ ಶ್ರೀಶ ಕುಮಾರ್ ಪಂಜತ್ತಡ್ಕ ಅವರು ಎಂ.ಗಂಗಾಧರ ಭಟ್ ಅವರ ಸಂಸ್ಮರಣೆ ಮಾಡಿದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತನಾಡಿದರು. ಕೆ.ಸತ್ಯನಾರಾಯಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಟಿ.ಶಂಕರನಾರಾಯಣ ಭಟ್ ವಂದಿಸಿದರು. ಪುಟಾಣಿ ತ್ರೈ ಭಟ್ ಪ್ರಾರ್ಥನೆ ಹಾಡಿದರು.