ಕಾಸರಗೋಡು: ಕೋಟೆಕಣಿ ಸಪರಿವಾರ ಶ್ರೀ ಅನ್ನಪೂರ್ಣೇಶ್ವರೀ ಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅ.8 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇರೇಬೈಲು ಶಿವಪ್ರಸಾದ್ ತಂತ್ರಿವರ್ಯರ ದಿವ್ಯ ಅನುಗ್ರಹದೊಂದಿಗೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ, ಗಣಪತಿ ಹವನ, ಕಲಶಾಭಿಷೇಕ, ಮಹಾಪೂಜೆ, ಶ್ರೀ ದೇವಿಯ ದಿವ್ಯ ದರ್ಶನ, ಭಜನೆಯಿಂದ ಆರಂಭಗೊಂಡ ನವರಾತ್ರಿ ಮಹೋತ್ಸವದ ಅಂಗವಾಗಿ ಅ.7 ರಂದು ರಾತ್ರಿ 1 ರಿಂದ ಅಗ್ನಿಸೇವೆ, ಅ.8 ರಂದು ಬೆಳಿಗ್ಗೆ ವಿದ್ಯಾರಂಭ ನಡೆಯಲಿದೆ.