ಮಡಿಯನ್ ಕ್ಷೇತ್ರದಲ್ಲಿ ಪುಟಾಣಿಗಳಿಗೆ ಅಕ್ಷರಾಭ್ಯಾಸ
ಕಾಸರಗೋಡು: ಮಡಿಯನ್ ಪಾಲಕಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಾರಿಕ್ಕಾಟ್ ಸುಬ್ರಹ್ಮಣ್ಯ ತಂತ್ರಿಗಳ ಕಾರ್ಮಿಕತ್ವದಲ್ಲಿ ವಿಜಯದಶಮಿಯ ಅಂಗವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಆರಂಭಿಸಲಾಯಿತು.
ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನದಾನ ಜರಗಿತು. ಸಂಜೆ ದೇವಿ ದರ್ಶನ, ಅಲಂಕಾರ ಪೂಜೆ, ಪ್ರಸಾದ ವಿತರಣೆ ನಡೆಯಿತು.
ಉದಯಮಂಗಲ ದೇವಸ್ಥಾನದಲ್ಲಿ ವಿದ್ಯಾರಂಭ
ಕಾಸರಗೋಡು: ಉದಯಮಂಗಲ ದೇವಸ್ಥಾನದಲ್ಲಿ ಮಕ್ಕಳಿಗೆ ವಿದ್ಯಾರಂಭ ನಡೆಯಿತು. ನವರಾತ್ರಿ ಮಹೋತ್ಸವದ ಅಂಗವಾಗಿ ವಿಜಯದಶಮಿ ದಿನದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಆರಂಭಿಸಲಾಯಿತು. ದೇವಸ್ಥಾನದ ಮುಖ್ಯ ಅರ್ಚಕ ರಾಜಗೋಪಾಲನ್ ಕಾರ್ಮಿಕತ್ವದಲ್ಲಿ ಕಾರ್ಯಕ್ರಮ ಜರಗಿತು. ದೇವಸ್ಥಾನದ ಆಡಳಿತ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಳಂಗರೆ ಪಾಲಕುನ್ನಿನಲ್ಲಿ
ಕಾಸರಗೋಡು: ತಳಂಗರೆ ಪಾಲಕುನ್ನು ಶ್ರೀ ಚೀರುಂಬಾ ಭಗವತಿ ಕೇತ್ರದಲ್ಲಿ ಇಳಯ ಭಗವತಿ ಅಯ್ತಾರ್ ಅವರು ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ನಡೆಸಿದರು.
ನಾಯ್ಕರ ಹಿತ್ತಿಲು ಮಲ್ಲಿಕಾರ್ಜುನ ಕ್ಷೇತ್ರದಲ್ಲಿ
ಕಾಸರಗೋಡು: ನವರಾತ್ರಿ ಮಹೋತ್ಸವದ ಅಂಗವಾಗಿ ಚಿತ್ತಾರಿ ನಾಯ್ಕರ ಹಿತ್ತಿಲು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಚಂಡಿಕಾ ಯಾಗ ನಡೆಯಿತು.
ಕೋಟೆಕಣಿಯಲ್ಲಿ ಆಯುಧ ಪೂಜೆ