ಬದಿಯಡ್ಕ : ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವಿಶೇಷ ಸಭೆಯು ಇಂದು ಬೆಳಿಗ್ಗೆ 11 ಗಂಟೆಯಿಂದ ಶ್ರೀ ಕ್ಷೇತ್ರದಲ್ಲಿ ಜರಗಲಿರುವುದು. ಜೀರ್ಣೋದ್ಧಾರ ಕಾರ್ಯಗಳು ಈಗಾಗಲೇ ನಡೆಯುತ್ತಿದ್ದು, 2020 ಫೆಬ್ರವರಿ 6ರಿಂದ 12ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸುವುದೆಂದು ತೀರ್ಮಾನಿಸಲಾಗಿದೆ. ಬಾಕಿಯಿರುವ ಜೀರ್ಣೋದ್ಧಾರ ಕಾರ್ಯಗಳು ಹಾಗೂ ನೂತನ ಭೋಜನ ಶಾಲೆಯ ಕೆಲಸ ಕಾರ್ಯಗಳು ನಡೆಯಬೇಕಿದೆ. ಆದುದರಿಂದ ಭಕ್ತಾದಿಗಳೆಲ್ಲರೂ ವಿಶೇಷ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿಸಲಾಗಿದೆ.
ಗೋಸಾಡ ಕ್ಷೇತ್ರದಲ್ಲಿ ಇಂದು ವಿಶೇಷ ಸಭೆ
0
ಅಕ್ಟೋಬರ್ 05, 2019