ಕಾಸರಗೋಡು: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಜಿಲ್ಲಾ ವಾರ್ತಾ ಇಲಾಖೆ ವತಿಯಿಂದ ಅ.2ರಿಂದ 16 ವರೆಗೆ ಗಾಂಧಿಜಯಂತಿ ಪಕ್ಷಾಚರಣೆ ನಡೆಸಲಾಗುವುದು.
ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಟನೆ ಇಂದು(ಅ.2) ಮಧ್ಯಾಹ್ನ 2.30ಕ್ಕೆ ಪರವನಡ್ಕ ಸರಕಾರಿ ಮಾದರಿ ವಸತಿ ಶಾಲೆಯಲ್ಲಿ ನಡೆಯಲಿದ್ದು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಉದ್ಘಾಟಿಸುವರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಕ ಜಿ.ಬಿ.ವತ್ಸನ್ "ಗಾಂಧಿ ಸ್ಮೃತಿ" ಎಂಬ ವಿಷಯದಲ್ಲಿ ಉಪನ್ಯಾಸ ಮಾಡುವರು. ಹರಿತಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಪ್ರತಿ???? ಸ್ವೀಕಾರಕ್ಕೆ ನೇತೃತ್ವ ವಹಿಸುವರು. ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃಧ್ಧಿ ಅಧಿಕಾರಿ ಪಿ.ಟಿ.ಅನಂತಕುಮಾರ್, ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ಪಿ.ವಿ.ಜಸೀರ್, ಪರವನಡ್ಕ ಎಂ.ಆರ್.ಎಸ್.ಪ್ರಾಂಶುಪಾಲೆ ಕೆ.ಎಸ್.ಶೀಲಾ, ಮುಖ್ಯಶಿಕ್ಷಕ ಎ.ಸುರೇಶ್ ಕುಮಾರ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಹಾಯಕ ಸಂಚಾಲಕ ಸಿ.ಹರಿದಾಸ್, ಪರವನಡ್ಕ ಎಂ.ಆರ್.ಎಸ್. ಹಿರಿಯ ವರಿಷ್ಠಾಧಿಕಾರಿ ಕೆ.ಮಧುಸೂದನನ್ ,ಕೆ.ವಿ.ರಾಘವನ್ ಮೊದಲಾದವರು ಉಪಸ್ಥಿತರಿದ್ದರು.