ಕಾಸರಗೋಡು: ಚುನಾವಣೆ ಸಂದರ್ಭ ಜಾರಿಯಲ್ಲಿರುವ ನೀತಿಸಂಹಿತೆ ಉಲ್ಲಂಘನೆ ನಡೆದರೆ, ಅದನ್ನು ಮತದಾತರೇ ನೇರವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಪೂರಕವಾಗಿರುವ ಮೊಬೈಲ್ ಅಪ್ಲಿಕೇಶನ್ "ಸಿಟಿಝನ್ ವಿಝಿಲ್(ಸಿ ವಿಝಿಲ್)" ಜಿಲ್ಲೆಯಲ್ಲಿ ಚಟುವಟಿಕೆಗೆ ಸಿದ್ಧವಾಗಿದೆ.
ಮೊಬೈಲ್ ಆಪ್ ಮೂಲಕ ನೀತಿಸಂಹಿತೆ ಉಲ್ಲಂಘನೆ ಕೆಲವೇ ನಿಮಿಷಗಳಲ್ಲಿ ಚುನಾವಣೆ ಅಧಿಕಾರಿಯ ಗಮನಕ್ಕೆ ಬರುವ ರೀತಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಿವಿಝಿಲ್ ನ ನಿಯಂತ್ರಣ ಕೊಠಡಿ ಚಟುವಟಿಕೆ ನಡೆಸುತ್ತಿದೆ. ನೀತಿಸಂಹಿತೆ ಉಲ್ಲಂಘನೆ ನಡೆದಿರುವುದು ಗಮನಕ್ಕೆ ಬಂದಲ್ಲಿ, ಪೋಟೋ ಅಥವಾ ವೀಡಿಯೋ ನಡೆಸಿ ಆಪ್ ನಲ್ಲಿ ಅಪ್ ಲೋಡ್ ನಡೆಸಿದರೆ ಅದನ್ನೇ ದೂರು ಎಂಬುದಾಗಿ ಪರಿಶೀಲಿಸಲಾಗುತ್ತದೆ. ಜಿಯೋಗ್ರಾಫಿಕ್ ಇನ್ ಫಾರ್ಮೇಶನ್ ಸಿಸ್ಟಂ ಬಳಸಿ ನೀತಿಸಂಹಿತೆ ಉಲ್ಲಂಘನೆ ನಡೆದಿರುವ ಜಾಗದ ಪತ್ತೆ ಮಾಡಬಹುದಾಗಿದೆ. ದೂರು ಅಪ್ ಲೋಡ್ ನಡೆಸುವ ಮೂಲಕ ಯೂನಿಕ್ ಐಡಿಯೊಂದು ಲಭಿಸಲಿದೆ. ಈ ಮೂಲಕ ಇದರ ಫೊಟೋ ಆಫ್ ಮೊಬೈಲ್ ನಲ್ಲೇ ಟ್ರಾಕ್ ನಡೆಸಲು ಮತದಾತರಿಗೆ ಸಾಧ್ಯ.
ಒಬ್ಬರಿಗೆ ಒಂದಕ್ಕಿಂತ ಅಧಿಕ ನೀತಿಸಂಹಿತೆ ಉಲ್ಲಂಘನೆ ವರದಿ ಮಾಡಬುದಾಗಿ ಎಂಬುದು ಇಲ್ಲಿನ ಮತ್ತೊಂದು ವಿಸೇಷತೆಯಾಗಿದೆ. ದೂರುದಾತನ ಹೆಸರು, ವಿಳಾಸ ಗುಪ್ತವಾಗಿರಿಸಲಾಗುವುದು. ಆಪ್ ನ ದುರುಪಯೋಗ ನಡೆಸಿದಲ್ಲಿ ಅದನ್ನು ತಡೆಯಲು ಇರುವ ಪೀಚರ್ ಗಳೂ ಇದರಲ್ಲಿದೆ. ನೀತಿ ಸಂಹಿತೆ ಉಲ್ಲಂಘನೆ ಸಂಬಮಧ ದೂರುಗಳು ಮಾತ್ರ ಇದರಲ್ಲಿಸ್ವೀಕರಿಸಲಾಗುವುದು. ಫೊಟೋ ಯಾ ವೀಡಿಯೋ ಕ್ಲಿಕ್ ನಡೆಸಿದ ನಂತರ ಘಟನೆ ವರದಿ ಮಾಡಲು5 ನಿಮಿಷ ಲಭಿಸಲಿದೆ. ಮೊದಲೇ ರೆಕಾರ್ಡ್ ನಡೆಸಿದ ವೀಡಿಯೋ, ಹಳೆ ಫೊಟೋ ಅಪ್ ಲೋಡ್ ನಡೆಸಲು ಸಾಧ್ಯವಿಲ್ಲ. ಆಪ್ ಮೂಲಕ ದೂರು ನಿಯಂತ್ರಣ ಕೊಠಡಿಗೆ ಲಭಿಸಿ, ಅಲ್ಲಿಂದ ???ಂಟಿ ಡಿಫೇಸ್ ಮೆಂಟ್ ಸ್ಕ್ವಾಡ್ ಗೆ ಹಸ್ತಾಂತರಿಸಲಾಗುವುದು. ದೂರು ನಿಜವಾಗಿದ್ದಲ್ಲಿ ಕೈಗೊಂಡ ಕ್ರಮಗಳಕುರಿತು 100 ನಿಮಿಷದೊಳಗೆ ದೂರುದಾತನಿಗೆ ಉತ್ತರವೂ ಲಭಿಸಲಿದೆ.