ಕಾಸರಗೋಡು: ನಿವೃತ್ತ ಶಿಕ್ಷಕ, ಹಾಸ್ಯ ಸಾಹಿತಿ, ಕಥೆಗಾರ ವೈ.ಸತ್ಯನಾರಾಯಣ ಕಾಸರಗೋಡು ಅವರು ಅ.5 ರಂದು 80 ನೇ ವರ್ಷಕ್ಕೆ ಕಾಲಿರಿಸಲಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿ ಬಳಗದಿಂದ ಅಭಿನಂದನೆ ಕಾರ್ಯಕ್ರಮ ಅ.5 ರಂದು ಬೆಳಗ್ಗೆ 10 ರಿಂದ ಬೀರಂತಬೈಲಿನ ಲಯನ್ಸ್ ಸೇವಾ ಮಂದಿರದಲ್ಲಿ ಜರಗಲಿದೆ.
ಕಾರ್ಯಕ್ರಮದಲ್ಲಿ ಡಾ.ಎಂ.ಶ್ರೀಪಾದ ರಾವ್ ಅಧ್ಯಕ್ಷತೆ ವಹಿಸುವರು. ಖ್ಯಾತ ಹಿರಿಯ ಹಾಸ್ಯ ಸಾಹಿತಿ ಎಚ್.ಗೋಪಾಲ ಭಟ್(ಕು.ಗೋ) ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಾಸ್ಯ ಸಾಹಿತಿ ಎಸ್.ಎಸ್.ಪಡಶೆಟ್ಟಿ ಅಭಿನಂದನಾ ಗ್ರಂಥ `ಹಾಸ್ಯ ತಪಸ್ವಿ' ಯನ್ನು ಬಿಡುಗಡೆಗೊಳಿಸುವರು. ಹಾಸ್ಯ ಸಾಹಿತಿ ಕೋ.ಲ.ರಂಗನಾಥ ರಾವ್ ಅವರು ಸತ್ಯನಾರಾಯಣ ಕಾಸರಗೋಡು ಬರೆದ ಹತ್ತನೇ ಕೃತಿ `ಬಡಾಯಿ ಎಕ್ಸ್‍ಪ್ರೆಸ್' ಕೃತಿಯನ್ನು ಬಿಡುಗಡೆಗೊಳಿಸುವರು. ಕೋ.ಲ.ರಂಗನಾಥ ರಾಯರು ಸಂಪಾದಿಸಿದ ಮೂರು ಕೃತಿಗಳನ್ನು ವೈ.ಸತ್ಯನಾರಾಯಣ ಕಾಸರಗೋಡು ಬಿಡುಗಡೆಗೊಳಿಸುವರು. ಡಾ|ರಮಾನಂದ ಬನಾರಿ, ಪೆÇ್ರ|ವಿ.ಬಿ.ಅರ್ತಿಕಜೆ ವಿಶೇಷ ಆಹ್ವಾನಿತರಾಗಿರುವರು. ಹಿರಿಯ ಸಾಹಿತಿ ಎಂ.ಜಿ.ದೇಶಪಾಂಡೆ, ಕವಿ ಕೆ.ಪುಂಡಲೀಕ ನಾಯಕ್, ಬೀದರಿನ ಇತರ ಆರು ಮಂದಿ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಅಲ್ಲದೆ ಹಾಸ್ಯ ರಸಾಯನ, ಸಮ್ಮಾನ, ಗೌರವಾರ್ಪಣೆ ಮೊದಲಾದವು ನಡೆಯಲಿದೆ.
ಪ್ರಾಧ್ಯಾಪಕರಾದ ಡಾ|ರಾಧಾಕೃಷ್ಣ ಬೆಳ್ಳೂರು, ನಿವೃತ್ತ ಪ್ರಾಧ್ಯಾಪಿಕೆ ಡಾ|ಯು.ಮಹೇಶ್ವರಿ, ಲೇಖಕಿ ಜೋತಿಪ್ರಭಾ ಎಸ್.ರಾವ್ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ಎಂ.ಈಶ್ವರ ರಾವ್ ಶುಭಹಾರೈಸುವರು.
ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ವಿ.ಭಟ್, ಡಾ|ಕೆ.ಕಮಲಾಕ್ಷ, ಪೆÇ್ರ|ಪಿ.ಎನ್.ಮೂಡಿತ್ತಾಯ, ನಟ ನಿರ್ದೇಶಕ ಕಾಸರಗೋಡು ಚಿನ್ನಾ, ಕರ್ನಾಟಕ ಬ್ಯಾಂಕ್‍ನ ನಿವೃತ್ತ ಎಜಿಎಂ ಶ್ರೀನಿವಾಸ ಕುಂಡಾಪು, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಹರೀಶ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.