ಮುಳ್ಳೇರಿಯ: ಬೆಳ್ಳೂರು ಕೃಷಿಭವನದಲ್ಲಿ ಕಸಿ ಮಾಡಲಾದ ಅಲ್ಫೋನ್ಸೋ ಮತ್ತು ಕರ್ಪೂರಂ ಜಾತಿಯ ಮಾವಿನ ಸಸಿಗಳನ್ನು ವಿತರಿಸಲಾಗುತ್ತಿದೆ.
ಅಗತ್ಯವಿರುವ ಕೃಷಿಕರು ಭೂ ತೆರಿಗೆ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿಯೊಂದಿಗೆ ನ.15ರ ಮೊದಲು ಕಿನ್ನಿಂಗಾರು ಕೃಷಿ ಭವನ ಸಂಪರ್ಕಿಸುವಂತೆ ಕೃಷಿ ಅಧಿಕಾರಿ ತಿಳಿಸಿದ್ದಾರೆ.