ಬದಿಯಡ್ಕ: ಇಲ್ಲಿನ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಆಶ್ರಯದಲ್ಲಿ ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ಮಾರ್ಗದರ್ಶನದಲ್ಲಿ ನವರಾತ್ರಿ ಸಂದರ್ಭದಲ್ಲಿ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ನಡೆಯುವ ರಂಗಸಿರಿ ಯಕ್ಷ ಪಯಣ -2019ರ ಆಮಂತ್ರಣ ಪತ್ರಿಕೆಯನ್ನು ಬದಿಯಡ್ಕದ ನವಜೀವನ ಪ್ರೌಢಶಾಲೆಯ ಶಿಕ್ಷಕಿ, ರಂಗಸಿರಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ಪುಂಡೂರು ಪ್ರಭಾವತಿ ಕೆದಿಲಾಯ ಇತ್ತೀಚೆಗೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್, ಕೆ.ನರಸಿಂಹ ಭಟ್ ಏತಡ್ಕ, ಬಿ.ಗಣೇಶ್ ಪೈ, ಪ್ರಮೀಳಾ ಚುಳ್ಳಿಕ್ಕಾನ, ನಿರ್ಮಲಾ ಶೇಷಪ್ಪ ಖಂಡಿಗೆ, ದಿನೇಶ್ ಬೊಳಂಬು, ಅಭಿಜ್ಞಾ ಬೊಳಂಬು ಮೊದಲಾದವರು ಭಾಗವಹಿಸಿದ್ದರು. ಶಾರದಾ ಎಸ್.ಭಟ್ ಕಾಡಮನೆ ಸ್ವಾಗತಿಸಿ, ವಿರಾಜ್ ಅಡೂರು ವಂದಿಸಿದರು. ಯಕ್ಷ ಪಯಣದ ಸಂಚಾಲಕ ಶ್ರೀಶಕುಮಾರ ಪಂಜಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.