ಕಾಸರಗೋಡು: ಬಿ.ಎಸ್.ಎನ್.ಎಲ್ ಕ್ಯಾಶ್ವಲ್ ಕಾಂಟ್ರಾಕ್ಟ್ ಲೇಬರ್ಸ್ ಯೂನಿಯನ್(ಸಿಐಟಿಯು) ರಾಜ್ಯ ಮಟ್ಟದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಕಾಸರಗೋಡು ಟೆಲಿಫೆÇೀನ್ ಭವನ ಮುಂಭಾಗದಲ್ಲಿ ಬಿಎಸ್‍ಎನ್‍ಎಲ್ ಸಿ.ಸಿ.ಎಲ್.ಯು. ಸರ್ಕಲ್ ವರ್ಕಿಂಗ್ ಅಧ್ಯಕ್ಷ ಕೆ.ಮೋಹನನ್ ಉದ್ಘಾಟಿಸಿದರು. ವಿ.ಪಿ.ಬಾಲಚಂದ್ರನ್ ಅಧ್ಯಕ್ಷತೆ ವಹಿಸಿದರು. ಸಿ.ಸಿ.ಎಲ್.ಯು. ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರನ್, ಸಿ.ಸಿ.ಎಲ್.ಯು. ರಾಜ್ಯ ಸಮಿತಿ ಸದಸ್ಯ ಜನಾರ್ಧನನ್, ಎಸ್.ಎನ್.ಇ.ಎ. ಚಂದ್ರಚೂಡನ್ ಮೊದಲಾದವರು ಮಾತನಾಡಿದರು. ವಿಶ್ವ ಕುಮಾರ್ ಎಂ. ಸ್ವಾಗತಿಸಿದರು. ವಿನಯರಾಜ್ ವಂದಿಸಿದರು.
ಕಳೆದ ಏಳು ತಿಂಗಳ ಬಾಕಿ ಸಂಬಳವನ್ನು ಕೂಡಲೇ ನೀಡಬೇಕು, ಸೇವೆಯಿಂದ ತೆಗೆದು ಹಾಕುವ ಕ್ರಮವನ್ನು ಕೊನೆಗೊಳಿಸಬೇಕು, ಎಲ್ಲಾ ವಿಭಾಗ ಕಾರ್ಮಿಕರ ಕೆಲಸದ ಕಾಲಾವಧಿಯನ್ನು ಕಡಿಮೆಗೊಳಿಸಬೇಕು, ಬಿ.ಎಸ್.ಎನ್.ಎಲ್. ಸಾರ್ವಜನಿಕ ಸಂಸ್ಥೆಯನ್ನು ಸಂರಕ್ಷಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ಆರಂಭಿಸಲಾಗಿದೆ.