ಕಾಸರಗೋಡು: ಗಾಂಧಿ ಜಯಂತಿ ಅಂಗವಾಗಿ ಸಿಪಿಸಿ ಆರ್ ಐ ಸಿಬ್ಬಂದಿಗಳು ಸಂಸ್ಥೆಯ ಮುಂಭಾಗದ ರಸ್ತೆ ಬದಿಯನ್ನು ಶುಚಿತ್ವಗೊಳಿಸಿದರು.
ಸ್ವಾತಂತ್ರ್ಯ ಹೋರಾಟಗಾರ ಕೆ.ಆರ್.ಕಣ್ಣನ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕಿ ಡಾ.ಅನಿತಾ ಕರುಣ್ ಅಧ್ಯಕ್ಷತೆ ವಹಿಸಿದರು. ಇದೇ ಸಂದರ್ಭದಲ್ಲಿ ಆಯೋಜಿಸಿದ ಕ್ವಿಜ್ ಹಾಗು ಚಿತ್ರ ರಚನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಜೈಮಾತಾ ಸೀನಿಯರ್ ಸೆಕೆಂಡರಿ ಸ್ಕೂಲ್ ಕಾಸರಗೋಡು ತಂಡ ಕ್ವಿಜ್‍ನಲ್ಲಿ ಪ್ರಥಮ ಬಹುಮಾನ ಪಡೆಯಿತು. ದ್ವಿತೀಯ ಬಹುಮಾನವನ್ನು ನಾಯಮ್ಮಾರಮೂಲೆಯ ಟಿಐಎಚ್‍ಎಸ್ ಮತ್ತು ತೃತೀಯ ಬಹುಮಾನವನ್ನು ಕೆ.ವಿ. ನಂ.1.ಸಿಪಿಸಿಆರ್‍ಐ ಪಡೆಯಿತು. ಚಿತ್ರ ರಚನೆ ಸ್ಪರ್ಧೆಯಲ್ಲಿ ಕೆ.ವಿ.ನಂ.1 ಪ್ರಥಮ ಬಹುಮಾನ ಪಡೆದರೆ, ದ್ವಿತೀಯ ಬಹುಮಾನವನ್ನು ನಾಯಮ್ಮಾರಮೂಲೆಯ ಟಿಐಎಚ್‍ಎಸ್ ಪಡೆಯಿತು. ಡಾ.ಕೆ.ಮುರಳೀಧರನ್ ಸ್ವಾಗತಿಸಿ, ಡಾ.ಪಿ.ಎಸ್.ಪ್ರತಿಭಾ ವಂದಿಸಿದರು.