ಕಾಸರಗೋಡು: ಬಿರುಸಿನ ಮಳೆಯಾಗುತ್ತಿರುವುದರಿಂದ ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‍ಬಾಬು ತಿಳಿಸಿದ್ದಾರೆ. ಅಲ್ಲದೆ, ಮುಂದಿನ ಆದೇಶ ಬರುವಲ್ಲಿ ವರೆಗೆ ಪ್ರವಾಸಿಗಳೂ ಬೀಚ್ ಪ್ರವಾಸಕ್ಕೆ ತೆರಳದಿರುವಂತೆ ಸೂಚಿಸಲಾಗಿದೆ. ಕರಾವಳಿ ಪ್ರದೇಶದ ಜನತೆ ಜಾಗ್ರತೆ ಪಾಲಿಸುವಂತೆ ಹಾಗೂ ಅಗತ್ಯಬಿದ್ದಲ್ಲಿ, ಕರಾವಳಿಯ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಆಯಾ ಗ್ರಾಮಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಕ್ಷುಬ್ಧಗೊಂಡ ಸಮುದ್ರ-ಜಾಗ್ರತೆ ಪಾಲಿಸಲು ಡಿಸಿ ಸೂಚನೆ
0
ಅಕ್ಟೋಬರ್ 30, 2019