ಬದಿಯಡ್ಕ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಮಹಾತ್ಮಾ ಗಾಂಧಿಯವರ ಜನ್ಮದಿನದ ಪ್ರಯುಕ್ತ ಶಾಲಾಮಕ್ಕಳಿಗೆ ಸ್ಪರ್ಧಾತ್ಮಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕಿರಿಯ, ಹಿರಿಯ ಪ್ರಾಥಮಿಕ ಹೈಸ್ಕೂಲ್ ವಿಭಾಗಗಳಿಗೆ ಸ್ಪರ್ಧಾತ್ಮಕವಾಗಿ ರಾಮಾಯಣ, ಮಹಾಭಾರತ, ಹಾಗೂ ರಾಷ್ಟ್ರ ಸಂವಿಧಾನದ ಬಗೆಗಿನ ರಸಪ್ರಶ್ನೆಗಳನ್ನು ನಡೆಸಿದ ಬಳಿಕ ಸಭಾ ಕಾರ್ಯಕ್ರಮಗಳು ನಡೆದುವು. ವೇದಿಕೆಯಲ್ಲಿ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಏರ್ಪಟ್ಟವು.
ಸಭೆಯಲ್ಲಿ ಶಾಲಾ ಆಡಳಿತಾಧಿಕಾರಿ ಶ್ಯಾಂಭಟ್ ದರ್ಬೆಮಾರ್ಗ ಮಾತನಾಡಿ, ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮಾಗಾಂಧೀಜಿ ಹಾಗೂ ಭಾರತದ ಏಕೀಕರಣದ ರೂವಾರಿ, ಎರಡನೆ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. ಇಬ್ಬರ ಜನ್ಮದಿನವೂ ಅಕ್ಟೋಬರ್ ಎರಡರಂದು. ಅಂದು ಅವರಿಬ್ಬರನ್ನೂ ನೆನೆಯುವುದರೊಂದಿಗೆ ಅವರಿಬ್ಬರಿಗೂ ಗೌರವಾರ್ಪಣೆ ಸಲ್ಲಿಸಬೇಕು ಎಂದರು. ವೇದಿಕೆಯಲ್ಲಿ ಅತಿಥಿಗಳಾಗಿ ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ, ಸಂಸ್ಕøತ ಅಧ್ಯಾಪಕ ವಿಜಯ ಹಾಗೂ ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ ಉಪಸ್ಥಿತರಿದ್ದು ಮಾತನಾಡಿದರು. ಕು.ಚೈತ್ರಾ ಸ್ವಾಗತಿಸಿ, ಕು. ಸೃಜನಾ ಪರಿಚಯಿಸಿದರು. ಚಿನ್ಮಯಿ ಹಾಗೂ ರೇಶ್ಮಾ ನಿರೂಪಿಸಿದರು. ಅಧ್ಯಾಪಕ ಹರಿಪ್ರಸಾದ್ ವಂದಿಸಿದರು.