ನವದೆಹಲಿ: ಏರ್ ಮಾರ್ಷಲ್ ಹರ್ಜಿತ್ ಸಿಂಗ್ ಅರೋರಾ ಅವರಿಂದು ಭಾರತೀಯ ವಾಯುಪಡೆಯ ಉಪಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಏರ್ ಮಾರ್ಷಲ್ ಹರ್ಜಿತ್ ಸಿಂಗ್ ಅರೋರಾ ಅವರು 1981ರಲ್ಲಿ ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಿ ನಿಯೋಜನೆಗೊಂಡಿದ್ದರು. ಅಪಘಾತ ಮುಕ್ತ ಕಾರ್ಯಾಚರಣೆಯ ಹಾರಾಟದ ಶ್ರೀಮಂತ ಮತ್ತು ವೈವಿಧ್ಯಮಯ ಅನುಭವವನ್ನು ಅವರು ಹೊಂದಿದ್ದಾರೆ. ಇದರಲ್ಲಿ ಮಿಗ್ 21, ಮಿಗ್ 29 ಹೆಲಿಕಾಪ್ಟರ್ ಗಳು ಸೇರಿದಂತೆ ಐಎಎಫ್ ದಾಸ್ತಾನುಗಳಲ್ಲಿನ ಇತರ ವಿಮಾನಗಳು ಸೇರಿವೆ ಎಂದು ಐಎಎಫ್ ವಕ್ತಾರ ವಿಂಗ್ ಕಮಾಂಡರ್ ಅನುಪಮ್ ಬ್ಯಾನರ್ಜಿ ಹೇಳಿದ್ದಾರೆ. ಅರೋರಾ ವಾಯು ಯುದ್ಧ ಅಭಿವೃದ್ಧಿ ಸ್ಥಾಪನೆ ವಿಷಯದಲ್ಲಿ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜು ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜಿನಿಂದ ಪದವೀಧರರಾಗಿದ್ದಾರೆ.