ಪೆರ್ಲ: ದಶಮಾನೋತ್ಸವ ಸಂಭ್ರಮದಲ್ಲಿರುವ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವತಿಯಿಂದ ನಡೆಯುತ್ತಿರುವ ಅಭಿಯಾನ `ರಂಗಸಿರಿ ದಸರಾ ಯಕ್ಷ ಪಯಣ"ದ ಮೂರನೇ ದಿನದ ಕಾರ್ಯಕ್ರಮವು ಶುಳುವಾಲಮೂಲೆ ಶ್ರೀಸದನದಲ್ಲಿ ನಡೆಯಿತು.
ವೇದಮೂರ್ತಿ ಶಿವ ಸುಬ್ರಹ್ಮಣ್ಯ ಭಟ್ ದೀಪೆÇೀಜ್ವಲನೆ ಮಾಡಿ ಸಂಸ್ಥೆಯನ್ನು ಹರಸಿದರು. ಶಂಕರನಾರಾಯಣ ಭಟ್ ಪಳ್ಳತ್ತಡ್ಕ, ಕುಮಾರ ನಾರಾಯಣಮಂಗಲ, ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು, ರಂಗಸಿರಿಯ ಸದಸ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ವಿದ್ಯಾರ್ಥಿಗಳಿಂದ `ಚಕ್ರವರ್ತಿ ದಶರಥ' ಯಕ್ಷಗಾನ ನಡೆಯಿತು. ದಶರಥನಾಗಿ ವರ್ಷಾಲಕ್ಷ್ಮಣ್, ಕೈಕೆಯಾಗಿ ಉಪಾಸನಾ ಪಂಜರಿಕೆ, ಶನೀಶ್ವರನಾಗಿ ಅಭಿಜ್ಞಾ ಬಿ.ಭಟ್, ಶಂಭರಾಸುರನಾಗಿ ಮನ್ವಿತ್ ಕೃಷ್ಣ ನಾರಾಯಣಮಂಗಲ, ಬಲಗಳಾಗಿ ಆಯುಷ್ ಲಕ್ಷ್ಮಣ್, ಶರತ್ ಕುಮಾರ್ ಹಾಗೂ ರಿತೇಶ್ ಸೂರಂಬೈಲು ಪಾತ್ರಗಳಲ್ಲಿ ಮಿಂಚಿದರು. ಹಿಮ್ಮೇಳದಲ್ಲಿ ಭಾಗವತರಾಗಿ ದಯಾನಂದ ಕೋಡಿಕ್ಕಲ್, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ, ಮದ್ದಳೆಯಲ್ಲಿ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು, ಚಕ್ರತಾಳದಲ್ಲಿ ಅನ್ವಯಕೃಷ್ಣ ಪಳ್ಳತ್ತಡ್ಕ ಸಹಕರಿಸಿದರು. ಕೇಶವ ಆಚಾರ್ಯ ಕಿನ್ಯ, ರಾಜೇಂದ್ರ ವಾಂತಿಚ್ಚಾಲು ನೇಪಥ್ಯದಲ್ಲಿ ಸಹಕರಿಸಿದರು.