ಕಾಸರಗೋಡು: ಕೇರಳ ರಾಜ್ಯೋತ್ಸವ ದಿನವಾಗಿರುವ ಇಂದು(ನ.1) ಆಡಳಿತ ಭಾಷಾ ದಿನಾಚರಣೆಯನ್ನು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು.
ಬೆಳಗ್ಗೆ 9.15 ಕ್ಕೆ ಜಿಲ್ಲಾ ವಾರ್ತಾ ಇಲಾಖೆ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ,ಕಾಸರಗೋಡು ಲಯನ್ಸ್ ಕ್ಲಬ್ ಜಂಟಿ ವತಿಯಿಂದ 150 ಕಲಾವಿದೆಯರು ಭಾಗವಹಿಸುವ ಬೃಹತ್ ತಿರುವಾದಿರಕಳಿ ನಡೆಯಲಿದ್ದು, ಈ ಮೂಲಕ ಸಮಾರಂಭಕ್ಕೆ ಚಾಲನೆ ಲಭಿಸಲಿದೆ. ಚೆರ್ಕಳ ಸೈನಬ್ ಸ್ಮಾರಕ ಬಿ.ಇಡಿ. ಕಾಲೇಜಿನ ಕಲಾವಿದೆಯರು ತಿರುವಾದಿರಕಳಿ ಪ್ರಸ್ತುತಪಡಿಸುವರು.
10.30ಕ್ಕೆ ಹಣಕಾಸು ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ ಕಚೇರಿ, ಆಡಳಿತೆ ಭಾಷಾಚರಣೆ ಜಿಲ್ಲ ಮಟ್ಟದ ಸಂಘಟಕ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಲಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಮಾರಂಭವನ್ನು ಉದ್ಘಾಟಿಸುವರು. ಅರ್ಥ ಮತ್ತು ಅಂಕಿಶಾಸ್ತ್ರ ವಿಭಾಗದ ಸಹಾಯಕ ನಿರ್ದೇಶಕ ರವೀಂದ್ರನ್ ಪಲೇರಿ ಅಧ್ಯಕ್ಷತೆ ವಹಿಸುವರು. ಜಿನೇಷ್ ಕುಮಾರ್ ಎರಮಂ ಪ್ರಧಾನ ಭಾಷಣ ಮಾಡುವರು. ಎಲ್ಲ ಸಿಬ್ಬಂದಿ ಆಡಳಿತೆ ಭಾಷಾ ಪ್ರತಿ ಜ್ಞೆ ಕೈಗೊಳ್ಳುವರು.