ಕಾಸರಗೋಡು: ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸಂಬಂಧ ಸಾರ್ವಜನಿಕರು ತಮ್ಮ ದೂರು ಮತ್ತು ಆರೋಪಗಳನ್ನು ಚುನಾವಣೆ ನಿರೀಕ್ಷಕ ಯಶವಂತ ವಿ. ಅವರಿಗೆ ಸಲ್ಲಿಸಬಹುದಾಗಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ 11 ಗಂಟೆ ವರೆಗೆ ಅವರು ಕಾಸರಗೋಡು ಸಿ.ಪಿ.ಸಿ.ಆರ್.ಐ. ಚಂದ್ರಗಿರಿ ಅತಿಥಿಗೃಹದಲ್ಲಿ ಸಂದರ್ಶನ ನೀಡುವರು. ಅವರ ದೂರವಾಣಿ ಸಂಖ್ಯೆ: 7306617732.
ವೈಭವದ ಪ್ರಚಾರವೇನೋ ನಡೆಸಬಹುದು: ಆದರೆ ಗಣನೆ ಬೇಕು..
ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಕ್ಷೇತ್ರದಲ್ಲಿ ನಡೆಸುವ ಪ್ರಚಾರ ವೆಚ್ಚದ ಸ್ಪಷ್ಟ ಗಣನೆಗಳಲ್ಲಿ ನಿಗಾ ಇರಿಸುವ ನಿಟ್ಟಿನಲ್ಲಿ ಚುನಾವಣೆ ವಿಭಾಗ ಸಿಬ್ಬಂದಿ ಪೂರ್ಣ ಸಿದ್ಧರಾದ್ದಾರೆ.
ಅಭ್ಯರ್ಥಿಗಳ ವೆಚ್ಚ ಬಗ್ಗೆ ನಿಗಾ ಇರಿಸುವ ಸಂಬಂಧ ಚುನಾವಣೆ ಪ್ರಚಾರಕ್ಕಾಗಿ ಬಳಸುವ ವಿವಿಧ ಸಾಮಾಗ್ರಿಗಳ ಸ್ಪಷ್ಟ ಗಣನೆ ದಾಖಲಿಸಬೇಕಾಗಿದೆ. ಇದಕ್ಕಾಗಿ 92 ವಿಧದ ಸಾಮಾಗ್ರಿಗಳ ಪಟ್ಟಿ ಪ್ರಕಟಿಸಲಾಗಿದೆ. ಪ್ರಚಾರ ವೇದಿಕೆಗಳಲ್ಲಿ ಬೇಗೆ ನಿವಾರಣೆಗೆ ಬಳಸುವಪುಟ್ಟ ಗಾತ್ರದ ಕೂಲರ್ ಒಂದು 500 ರೂ., ದೊಡ್ಡ ಗಾತ್ರದ್ದಕ್ಕೆ ಒಂದು ಸಾವಿರ ರೂ. ವೆಚ್ಚ ನಿಗದಿಪಡಿಸಲಾಗಿದೆ. ತೋರಣ ಇರ್ಮಾಣಕ್ಕೆ ಒಂದು ಅಡಿ ಉದ್ದಕ್ಕೆ 4 ರೂ., ಬಟ್ಟೆ ನಿರ್ಮಿತ ಬ್ಯಾನರ್ ಗೆ ಒಂದು ಅಡಿಗೆ 30 ರೂ., ಮರದ ಫ್ರೇಂ ಇರುವ ಫಲಕಕ್ಕೆ ಒಂದು ಅಡಿಗೆ 40 ರೂ., ಮರದಿಂದ ತಯಾರಿಸಿದ ಕಟೌಟ್ ಗೆ ಒಂದು ಅಡಿಗೆ 110 ರೂ., ಬಟ್ಟೆಯಿಂದ ನಿರ್ಮಿಸಿದ ಕಟೌಟ್ ಗೆ 55 ರೂ., ಬಟ್ಟೆಯ ಧ್ವಜಗಳಿಗೆ ಒಂದು ಅಡಿಗೆ 22 ರೂ. ಬೆಲೆ ನಿಗದಿಪಡಿಸಲಾಗಿದೆ. ಕಿರು ಗೇಟ್ ಗಳಿಗೆ 3 ಸಾವಿರ ರೂ., ಹಾಡುಗಳ ಸಹಿತದ (ಆಡಿಯೋ) ಪ್ರಚಾರಕ್ಕೆ ಒಬ್ಬರಿಗೆ 5 ಆವಿರ ರೂ., ಇಬ್ಬರು ಹಾಡುಗಾರರಿಗೆ 10ಸಾವಿರ ರೂ. ವೆಚ್ಚ ಗಣನೆ ಮಾಡಲಾಗಿದೆ.
ಚೆಂಡೆ, ಬ್ಯಾಂಡ್ ಮೇಳ ಸಹಿತ ಪ್ರಚಾರಕ್ಕೆ ಒಬ್ಬ ಕಲಾವಿದನಿಗೆ ತಲಾ 500 ರೂ., ಟ್ಯೂಬ್ ಲೈಟ್ ಗೆ 10 ರೂ., ಹಲಾಜಿನ್ ಲೈಟ್ ಗೆ 200 ರೂ., ಎಲ್.ಇ.ಡಿ. ಟಿ.ವಿ.ಗೆ 750 ರೂ., ವೀಡಿಯೋ ವಾಲ್ ಚಿಕ್ಕದು(8:6) ದಿನಕ್ಕೆ 6 ಸಾವಿರ ರೂ., ಜನರೇಟರ್ 15 ಕೆ.ವಿ.ಗೆ 3 ಸಾವಿರರೂ., ಸಭಾಂಗಣಕ್ಕೆ ನಗರಪ್ರದೇಶಗಳಲ್ಲಿ 500 ಜನರು ಸೇರುವಲ್ಲಿ 10 ಸಾವಿರ ರೂ., ಪಂಚಾಯತ್ ಮಟ್ಟದಲ್ಲಿ 5 ಸಾವಿರ ರೂ. ವೆಚ್ಚ ನಿಗದಿಪಡಿಸಲಾಗಿದೆ. ನೇತಾರರನ್ನು, ಅಭ್ಯರ್ಥಿಗಳನ್ನು ಕಾರ್ಪೆಟ್ ಹಾಸಿ ಸ್ವಾಗತಿಸುವ ನಿಟ್ಟಿನಲ್ಲಿ ಚದರ ಅಡಿಗೆ 5 ರೂ.ನಂತೆ ಬೆಲೆ ನಿಗದಿಪಡಿಸಲಾಗಿದೆ.
ತಾತ್ಕಾಲಿಕ ಚುನಾವಣೆ ಬೂತ್ ಗೆ ಒಂದು ಸಾವಿರ ರೂ., ಪೆಡೆಸ್ಟಲ್ ಫ್ಯಾನ್ ಒಂದಕ್ಕೆ ದಿನಕ್ಕೆ 200 ರೂ., ಹವಾನಿಯಂತ್ರಿತ ಕೊಠಡಿಗಳಿಗೆ 0ಂದು ಸಾವಿರ ರೂ., ಹವಾನಿಯಂತ್ರಿತವಲ್ಲದ ಕೊಠಡಿಗೆ 600 ರೂ., ಹಾಡಿರ್ಂಗ್ ಒಂದು ಅಡಿಗೆ 110 ರೂ., 7 ಮಂದಿ ಕುಳಿತುಕೊಳ್ಳಬಹುದಾದ ಸ್ಟೇಜ್ ಗೆ 2 ಸಾವಿರ ರೂ., 15 ಮಂದಿ ಕುಳಿಯುಕೊಳ್ಳಬಹುದಾದ ಸ್ಟೇಜ್ ಗೆ 4 ಸಾವಿರ ರೂ., ದೊಡ್ಡ ಸ್ಟೇಜ್ ಗೆ 7500 ರೂ., ವಾಹದಲ್ಲೇ ವೇದಿಕೆ ನಡೆಸುವುದಿದ್ದರೆ 5 ಸಾವಿರ ರೂ. ನಿಗದಿಪಡಿಸಲಾಗಿದೆ. ಮುತ್ತುಕೊಡೆ ಒಂದಕ್ಕೆ 150 ರೂ., ಫಲಕ ಒಂದಕ್ಕೆ 1500, ವಿವಿಧ ರೀತಿಯ ಕರಪತ್ರ, ಭಿತ್ತಿಪತ್ರ ಸಹಿತ ಮುದ್ರಿತ ಸಾಮಾಗ್ರಿಗಳಿಗೆ ಡಬಲ್ ಡಮ್ಮಿ ಗಾತ್ರದ್ದಕ್ಕೆ ಮೊದಲ ಹತ್ತುಸಾವಿರ ಪ್ರತಿಗಳಿಗೆ 6 ಸಾವಿರ ರೂ., ಹೆಚ್ಚುವರಿ ಒಂದು ಸಾವಿರ ಪ್ರತಿಗಳಿಗೆ 2 ಸಾವಿರ ರೂ. ಗಣನೆ ಮಾಡಲಾಗುವುದು. ಪೋಸ್ಟರ್ ಕಲರ್ ಹಾಫ್ ಡಮ್ಮಿ ವಿಸ್ತೀರ್ಣದವುಗಳಿಗೆ ಮೊದಲ ಹತ್ತು ಸಾವಿರ ಪ್ರತಿಗಳಿಗೆ 1800 ರೂ., ಹೆಚ್ಚುವರಿ ಪ್ರತಿ ಒಂದು ಸಾವಿರ ಪ್ರತಿಗಳಿಗೆ 600 ರೂ., ಗಣನೆ ಮಾಡಲಾಗುವುದು. ಅದಕ್ಕೂ ಹೆಚ್ಚುವರಿ ಒಂದು ಸಾವಿರ ಪ್ರತಿಗಳಿಗೆ 2300 ರೂ. ಗಣನೆ ಮಾಡಲಾಗುವುದು.
ಬಸ್ಸೊಂದಕ್ಕೆ ದಿನಕ್ಕೆ 6 ಸಾವಿರ ರೂ., ಕಾರು, ಜೀಪು ಇತ್ಯಾದಿಗಳಿಗೆ 2 ಸಾವಿರ ರೂ., ಟೆಂಪೋ, ಟ್ರಕ್ ಇತ್ಯಾದಿಗಳಿಗೆ 3 ಸಾವಿರ ರೂ., ಬೆಲೆ ನೊಗದಿಪಡಿಸಲಾಗಿದೆ. ವೆಬ್ ಸೈಟ್ ಹಾಸ್ಟಿಂಗ್ ಬೆಲೆ ಒಂದು ಸಾವಿರ ರೂ., ಡಿಸೈನ್ ಬೆಲೆ ಪೇಜಿಗೆ 500 ರೂ.ನಿಗದಿ ಪಡಿಸಲಾಗಿದೆ. ಪ್ರಚಾರ ಸಮಿತಿ ಕಚೇರಿಗಳಿಗೆ ಸ್ವತ ಕಟ್ಟಡಕ್ಕೆ , ಬಾಡಿಗೆ ಕಟ್ಟಡಗಳಿಗೆ ಚದರ ಮೀಟರ್ ಗೆ 20 ರೂ., ತಾತ್ಕಾಲಿಕ ಶೆಡ್ ಗಳಿಗೆ ಚದರಮೀಟರ್ ಗೆ 25 ರೂ., ಗಣನೆ ಮಾಡಲಾಗುವುದು. ಷಾಮಿಯಾನ ಚಪ್ಪರಕ್ಕೆ 10 ದಿನಕ್ಕೆ ಚದರ ಮೀಟರ್ ಗೆ 20 ರೂ., ಸೀಲಿಂಗ್ ಫ್ಯಾನ್ ಬಾಡಿಗೆಗೆ ಪಡೆಯುವ ವೇಳೆ 100 ರೂ.ವೆಚ್ಚ ಗಣನೆ ಮಾಡಲಾಗುವುದು.
ಆಹಾರ ವಿತರಣೆ ಸಹಿತ ಪ್ರಚಾರಕ್ಕೆ , ರಾಜಕೀಯ ಚಟುವಟಿಕೆಗಳಿಗೆ ಜನ ಸೇರಿಸಿದರೆ ಗಣನೆಯಲ್ಲಿ ಸೇರಿಸಲಾಗುವುದು. ಚಹಾ ಒಂದಕ್ಕೆ 8 ರೂ., ಉಪಹಾರಕ್ಕೆ ಒಬ್ಬರಿಗೆ 50 ರೂ., ಸಸ್ಯಾಹಾರಿ ಬಿರಿಯಾನಿಗೆ 75ರೂ.,ಮಾಂಸಾಹಾರಿ ಬಿರಿಯಾನಿಗೆ 130 ರೂ. ಬೆಲೆ ನಿಗದಿಪಡಿಸಲಾಗುವುದು. ಕರಿದ ತಿಂಡಿಗೆ 40 ರೂ., ಮಿಲ್ಕ್ ಶೇಕ್ ಗೆ 30 ರೂ.,ನಿಗದಿಪಡಿಸಲಾಗಿದೆ.
ಎಲ್ಲ ವೆಚ್ಚಗಳ ಸಹಿತ ಒಬ್ಬ ಅಭ್ಯರ್ಥಿಗೆ ವಿಧಾನಸಭೆ ಕ್ಷೇತ್ರದಲ್ಲಿ ಗರಿಷ್ಠ 28 ಲಕ್ಷ ರೂ. ವೆಚ್ಚ ಮಾಡಬಹುದಾಗಿದೆ. ಯಾವುದೇ ಸಂದೇಹಗಳಿದ್ದಲ್ಲಿ ಎಕ್ಸ್ ಪೆಂಡೀಚರ್ ಮೋನಿಟರಿಂಗ್ ನೋಡೆಲ್ ಅಧಿಕಾರಿ ಸತೀಶನ್ ಕೆ.(ಹಣಕಾಸು ಅಧಿಕಾರಿ, ಜಿಲ್ಲಾಧಿಕಾರಿ ಕಚೇರಿ ಕಾಸರಗೋಡು-ದೂರವಾಣಿ ಸಂಖ್ಯೆ: 9447648998.) ಅವರನ್ನು ಸಂಪರ್ಕಿಸಬಹುದು.