ಬದಿಯಡ್ಕ: ಇಲ್ಲಿನ ಕ್ರಿಯೇಟಿವ್ ಆಟ್ರ್ಸ್ ಹಾಗು ಕಾಮರ್ಸ್ ಕಾಲೇಜಿನಲ್ಲಿ ಪುತ್ತೂರಿನ ಮುಳಿಯ ಫೌಂಡೇಶನ್ ವತಿಯಿಂದ ಅರಣ್ಯ ಮರಗಳ `ಸೀಡ್ ಬಾಲ್' ವಿತರಣೆ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಕಾಲೇಜಿನ ಆಡಳಿತ ಟ್ರಸ್ಟಿ ರಂಗ ಶರ್ಮಾ ಉಪ್ಪಂಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕ್ರಿಯೇಟಿವಿಟಿಯನ್ನು ಬೆಳೆಸಲಾಗುತ್ತದೆ. ಸೀಡ್ ಬಾಲ್ ವಿತರಿಸಿ ಪರಿಸರ ಕಾಳಜಿ ತಿಳಿಸುವ, ಬೆಳೆಸುವ ಮುಳಿಯ ಫೌಂಡೇಶನ್‍ಗೆ ಅಭಿನಂದನೆಗಳು ಎಂದರು.
ಮುಖ್ಯ ಅತಿಥಿಯಾಗಿದ್ದ ಖ್ಯಾತ ಕೃಷಿ ಅಂಕಣಗಾರ, ತಜ್ಞ ಚಂದ್ರಶೇಖರ ಏತಡ್ಕ ಮಾತನಾಡಿ ಭತ್ತದ ಕೃಷಿ, ತರಕಾರಿ ಕೃಷಿ, ಇತರ ಆಹಾರೋತ್ಪನ್ನ, ಜೇನು ಕೃಷಿ ಇವುಗಳಿಂದ ಪ್ರಕೃತಿಗಾಗುವ ಲಾಭ, ಮಾನವನಿಗೆ ಇದರಿಂದಾಗುವ ಪ್ರಯೋಜನಗಳನ್ನು ವಿವರಿಸಿದರು.
ಮುಳಿಯ ಜ್ಯುವೆಲ್ಸ್‍ನ ಮಾರುಕಟ್ಟೆ ಪ್ರಬಂಧಕ ಸಂಜೀವ ಮಾತನಾಡಿ ಈ ವರ್ಷ ನಮ್ಮ ಮುಳಿಯ ಫೌಂಡೇಶನ್ ಒಂದು ಲಕ್ಷಕ್ಕೂ ಹೆಚ್ಚು ಸೀಡ್ ಬಾಲ್‍ಗಳನ್ನು ಪುತ್ತೂರು, ಬೆಳ್ತಂಗಡಿ, ಮಡಿಕೇರಿ ಹಾಗು ವಿವಿಧ ಪ್ರದೇಶಗಳ ಸುಮಾರು 40 ಶಾಲೆಗಳಲ್ಲಿ ವಿತರಿಸಿದೆ ಹಾಗು ಹೇಗೆ ಪ್ರಕೃತಿಯಲ್ಲಿ ಹಾಕಬೇಕು ಎಂಬುದನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಶಿವದಾಸ್ ಸಿ.ಎಚ್, ಅಧ್ಯಾಪಿಕೆ ಶ್ರೀಜ, ವಿದ್ಯಾರ್ಥಿ ನಾಯಕರಾದ ಅಜಯ್, ರಾಜೇಶ್, ಮೋಹಿತ್ ಕುಮಾರ್ ಉಪಸ್ಥಿತರಿದ್ದರು. ಶೈಲಜಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಕಾವ್ಯ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ವಂದಿಸಿದರು. ಮಧುಶ್ರೀ ಪ್ರಾರ್ಥನೆ ಹಾಡಿದರು.