ಕಾಸರಗೋಡು: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಅರಿಯದ ಅಧ್ಯಾಪಕರ ನೇಮಕಗೊಳಿಸಬಾರದೆಂಬ ಜಿಲ್ಲಾ ಪಂಚಾಯತಿ ಆಡಳಿತ ಸಮಿತಿಯ ಆದೇಶವನ್ನು ಗಾಳಿಗೆ ತೂರಿ ಜಿಲ್ಲಾ ಪಂಚಾಯತಿಯನ್ನು ಅಲುಗಾಡದ ಪುತ್ಥಳಿಯನ್ನಾಗಿಸಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ. ಕೆ ಶ್ರೀಕಾಂತ್ ಆರೋಪಿಸಿದರು.
ಜಿಲ್ಲಾ ಪಂಚಾಯತಿ ಆಡಳಿತ ಸಮಿತಿಯು ಕನ್ನಡ ಜನತೆಯನ್ನು ವಂಚಿಸಿ ಮೂಕ ಪ್ರೇಕ್ಷಕರನ್ನಾಗಿಸುವ ನಾಟಕವಾಡುತಿದೆ ಎಂದೂ ನಿರ್ಧಾರಗಳನ್ನು ಕೈಗೊಂಡರೂ ಅದನ್ನು ಉಲ್ಲಂಘಿಸಿ ಕನ್ನಡಿಗರನ್ನು ಹೀಯಾಳಿಸುತ್ತಿದೆ ಎಂದು ಶ್ರೀಕಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರನ್ನು ರಾಜ್ಯದ ಎಡರಂಗ ಸರ್ಕಾರ ಹಾಗೂ ಜಿಲ್ಲಾ ಪಂಚಾಯತಿ ಆಡಳಿತ ನಡೆಸುತ್ತಿರುವ ಯು.ಡಿ. ಎಫ್ ( ಬಲರಂಗ) ವಂಚಿಸುತ್ತಿದೆ ಎಂದು ಶ್ರೀಕಾಂತ್ ತಮ್ಮ ಆಕ್ರೋಶವನ್ನು ವ್ಯಕ್ತಡಿಸಿದ್ದಾರೆ.
ನವಂಬರ್ 2 ರ ತನಕ ವಿವಾದಿತರಾಗಿ ನೇಮಕಗೊಂಡವರು ಶಾಲೆಗಳಿಗೆ ತೆರಳಬಾರದೆಂಬ ಆ ಜ್ಞೆ ಯನ್ನು ಉಲಂಘಿಸಿದ್ದರೂ ಅದರ ವಿರುದ್ಧ ಧ್ವನಿ ಎತ್ತಲು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಸಾಧ್ಯವಾಗಿಲ್ಲ. ಇದು ಪ್ರತಿಭಟನಾಹ9ವಾಗಿದೆ ಎಂದು ಶ್ರೀಕಾಂತ್ ಹೇಳಿದರು.
ಈ ಬಗ್ಗೆ ಚರ್ಚೆ ನಡೆಸಲು ಶೀಘ್ರದಲ್ಲೇ ಜಿಲ್ಲಾ ಪಂಚಾಯತಿ ಸಭೆಯನ್ನು ಕರೆಯಬೇಕೆಂದು ಶ್ರೀಕಾಂತ್ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ .ಸಿ ಬಷೀರ್ ಅವರನ್ನು ಒತ್ತಾಯಿಸಿದ್ದಾರೆ.