ಮಂಜೇಶ್ವರ: ಚೌಕಿ ಶ್ರೀ ದುರ್ಗಾ ಹುಲಿಗುತ್ತು ಇದರ 15 ನೇ ವರ್ಷದ ಹುಲಿ ವೇಷದ ಸಾಂಸ್ಕøತಿಕ ಸಂಭ್ರಮವನ್ನು ನಿವೃತ್ತ ಸೈನಿಕ ದಿನೇಶ್ ಕುಮಾರ್ ಉದ್ಘಾಟಿಸಿದರು. ಹರೀಶ್ ಶೆಟ್ಟಿ ಮಾಡ ಅಧ್ಯಕ್ಷತೆ ವಹಿಸಿದರು.
ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಎ.ಪ್ರಸಾದ್ ಪ್ರಭು, ನವೀನ್‍ರಾಜ್ ಕೆ.ಜೆ, ಯಾದವ ಬಡಾಜೆ, ಇಂದಿರಾ ನಾಗೇಶ್, ಮೋಹನ್, ಹರೀಶ್ ಚೌಕಿ, ವಿಕ್ರಂ ಮಂಜೇಶ್ವರ, ಪದ್ಮನಾಭ ನರಿಂಗಾನ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೃಷ್ಣ ಬಡಾಜೆ, ಯಾದವ ಚೌಕಿ, ನಾಗೇಶ್ ಹೊಸಬೆಟ್ಟು, ಸಾಗರ್ ಸಹಿತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸಮ್ಮಾನಿಸಲಾಯಿತು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.