ಮುಳ್ಳೇರಿಯ: ಇಲ್ಲಿನ ಗಣೇಶ ಕಲಾ ಮಂದಿರದಲ್ಲಿ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮತ್ತು ವಿದ್ಯಾಶ್ರೀ ಸಂಗೀತ ಸಭಾ ಇದರ ಆಶ್ರಯದಲ್ಲಿ ಶ್ರೀ ಶಾರದಾ ಪೂಜೆ ಮತ್ತು ಸಂಗೀತಾರಾಧನೆ ಕಾರ್ಯಕ್ರಮಗಳು ಅ.8ರಂದು ನಡೆಯಲಿದೆ.
ಬೆಳಿಗ್ಗೆ 9.30ಕ್ಕೆ ಶಾರದಾ ಪೂಜೆಯ ಆರಂಭ, ಪುಸ್ತಕ ಪೂಜೆ, 9.45ಕ್ಕೆ ವಿದ್ಯಾಶ್ರೀ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಸರಸ್ವತಿ ವಂದನೆ, 10.30ಕ್ಕೆ ವಿದ್ಯಾರಂಭ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆಯಲಿದೆ.