ಕುಂಬಳೆ: ಗಡಿನಾಡಿನ ಹೆಮ್ಮೆಯ ಸಾಂಸ್ಕøತಿಕ ಕಲಾ ಸಂಸ್ಥೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನ ನಿರ್ಮಾಣದ ಸಂಕಲ್ಪವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ತೆಲಂಗಾಣ ಹೈದರಾಬಾದ್ ನಗರದಲ್ಲಿ ಕನ್ನಡ ನಾಟ್ಯರಂಗ ಹೈದರಾಬಾದ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ ಸಂಸ್ಥೆಯ ಸಹಯೋಗದೊಂದಿಗೆ ವಿವಿಧ ಸಂಘಟನೆಗಳು ಹಾಗೂ ಕಲಾಪೋಷಕರ ಸಹಕಾರದೊಂದಿಗೆ ಸೆ. 22ರಿಂದ 29ರವರೆಗೆ ಹೈದ್ರಾಬಾದ್ ನಗರದ ವಿವಿಧ ಸ್ಥಳಗಳಲ್ಲಿ ಯಕ್ಷಾಷ್ಟಕಂ ಪ್ರದರ್ಶನ ನಡೆಸಲಾಯಿತು. ಎಂಟು ದಿನಗಳಕಾಲ ಪ್ರತೀ ದಿನ ಸಂಜೆ 6ರಿಂದ ಯಕ್ಷಾಷ್ಟಕಂ ಶೀರ್ಷಿಕೆಯಡಿಯಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದು ಹೈದರಾಬಾದ್ ನಗರದ ಯಕ್ಷಪ್ರೇಮಿಗಳಿಂದ ಅಭೂತಪೂರ್ವ ಪ್ರೋತ್ಸಾಹ ದೊರೆತಿದ್ದು ಯಶಸ್ವಿಯಾಗಿ ಸಂಪನ್ನಗೊಂಡಿತು.
ಪ್ರಥಮ ಪ್ರದರ್ಶನ ಶ್ರೀ ರಾಘವೇಂದ್ರ ಸ್ವಾಮಿ ಮಠ ಅಲಕಾಪುರಿ ಮತ್ತು ಯಕ್ಷಪ್ರೇಮಿಗಳ ಪ್ರಾಯೋಜಕತ್ವದಲ್ಲಿ ಅಲಕಾಪುರಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶಶಿಪ್ರಭಾ ಪರಿಣಯ, ದ್ವಿತೀಯ ಪ್ರದರ್ಶನ ನರಸಿಂಹ ಶೆಟ್ಟಿ ಶಾದ್ ನಗರ ಹಾಗೂ ಕರುಣಾಕರ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ಸಾಹಿತ್ಯ ಮಂದಿರ ಕಾಚಿಗೂಡ ಲಿಂಗಂಪಲ್ಲಿಯಲ್ಲಿ ಗದಾಯುದ್ಧ ರಕ್ತರಾತ್ರಿ, ತೃತೀಯ ಪ್ರದರ್ಶನ ಶ್ರೀ ರಾಘವೇಂದ್ರ ಸ್ವಾಮಿ ಮಠ ಕಾಚಿಗೂಡ ಲಿಂಗಂಪಲ್ಲಿಯವರ ಪ್ರಾಯೋಜಕತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠ ಕಾಚಿಗೂಡ ಲಿಂಗಂಪಲ್ಲಿಯಲ್ಲಿ ಶ್ರೀ ಕೃಷ್ಣ ಲೀಲಾಮೃತಂ, ಚತುರ್ಥ ಪ್ರದರ್ಶನ ತೌಳವ ಸಮಾಜ ಸಿಕಂದರಾಬಾದ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸಿಕಂದರಾಬಾದ್ ಶ್ರೀಕೃಷ್ಣ ಮಠದಲ್ಲಿ ಭಸ್ಮಾಸುರ ಮೋಹಿನಿ, ಪಂಚಮ ಪ್ರದರ್ಶನ ರಂದು ಬರಕತ್ ಪುರ ಶ್ರೀ ರಾಘವೇಂದ್ರ ಸ್ವಾಮಿ ಮಠ ಪ್ರಾಯೋಜಕತ್ವದಲ್ಲಿ ಬರಕತ್ ಪುರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಾಗೋದ್ಧರಣ, ಷ್ಷಷ್ಠ ಪ್ರದರ್ಶನ ಬಂಟರ ಸಂಘ ಹೈದರಾಬಾದ್ ಹಾಗೂ ಯಕ್ಷಕಲಾ ಪ್ರೇಮಿಗಳ ಪ್ರಾಯೋಜಕತ್ವದಲ್ಲಿ ಶ್ರೀ ಪೂರ್ಣ ಬೋಧ ವಿದ್ಯಾ ಪೀಠ ಸಿಕಂದರಾ ಬಾದ್ ನಲ್ಲಿ ಭಕ್ತ ಪ್ರಹ್ಲಾದ, ಸಪ್ತಮ ಪ್ರದರ್ಶನ ಕನ್ನಡ ನಾಟ್ಯರಂಗ ಹೈದ್ರಾಬಾದ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸುಂದರಯ್ಯ ಕಲಾನಿಲಯಂ ಬಾಗ್ ಲಿಂಗಂಪಲ್ಲಿಯಲ್ಲಿ ಬೇಡರ ಕಣ್ಣಪ್ಪ, ಅಷ್ಟಮ ಪ್ರದರ್ಶನ ಶ್ರೀ ಮಾರಣಕಟ್ಟೆ ಕೃಷ್ಣ ಮೂರ್ತಿ ಸುಪ್ರಭಾತ್ ಹೋಟೆಲ್ ಸಮೂಹ ಹೈದರಾಬಾದ್ ಪ್ರಾಯೋಜಕತ್ವದಲ್ಲಿ ಶ್ರೀ ಶಂಕರ ಮಠ ನಲ್ಲಿಕುಂಟ ಹೈದರಾಬಾದ್ನಲ್ಲಿ ಏಕಾದಶಿ ದೇವಿ ಮಹಾತ್ಮೆ ನಡೆಯಿತು.
ತಂಡದಲ್ಲಿ ಭಾಗವತರು ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ದಿನೇಶ್ ಭಟ್ ಯಲ್ಲಾಪುರ, ಚಂಡೆ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಮದ್ದಳೆ ಲವಕುಮಾರ್ ಐಲ, ಚಕ್ರತಾಳ ನಿಶ್ವತ್ ಹಾಗೂ ಮುಮ್ಮೇಳದಲ್ಲಿ ರಾಧಾಕೃಷ್ಣ ನಾವಡ ಮಧೂರು, ಗುಂಡಿಮಜಲು ಗೋಪಾಲ ಭಟ್, ಶಂಭಯ್ಯ ಭಟ್ ಕಂಜರ್ಪಣೆ, ವಿಷ್ಣು ಶರ್ಮ ವಾಟೆಪಡ್ಪು, ಮಹೇಶ್ ಮಣಿಯಾಣಿ ದೊಡ್ಡತೋಟ, ಸುಬ್ರಹ್ಮಣ್ಯ ಭಟ್ ಪೆರುವೋಡಿ, ಶಶಿಕಿರಣ ಕಾವು, ರಾಜೇಶ್ ನಿಟ್ಟೆ, ಪ್ರಕಾಶ್ ನಾಯಕ್ ನೀರ್ಚಾಲು, ರಕ್ಷಿತ್ ರೈ ದೇಲಂಪಾಡಿ, ಅಕ್ಷಯ, ದಿನೇಶ, ಶ್ರೀಮುಖ ಭಾಗವಹಿಸಿದ್ದು, ಶ್ರೀ ಗಣೇಶ ಕಲಾ ವೃಂದ ಪೈವಳಿಕೆ ಸಂಸ್ಥೆ ವೇಶಭೂಷಣ ಪೂರೈಸಿದ್ದರು.