ಕುಂಬಳೆ: ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಕಾಸರಗೋಡು ಹಾಗೂ ಸಿರಿಗನ್ನಡ ವೇದಿಕೆ ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಜಂಟಿ ಆಶ್ರಯದಲ್ಲಿ ಸಾಹಿತ್ಯ-ಸಾಂಸ್ಕøತಿಕ - ಸಾಮಾಜಿಕ ನಾಡು - ನುಡಿಯ ಸೇವಾ ದ್ಯೇಯದೊಂದಿಗೆ ನಾಡ ಹಬ್ಬ ದಸಾರ ಪ್ರಯುಕ್ತ "ದಸರ ಸಾಹಿತ್ಯ ಸಂಭ್ರಮ" ಎಂಬ ವಿಶಿಷ್ಟ ಕಾರ್ಯಕ್ರಮವು ಇಂದು(ಅ. 02) ಅಪರಾಹ್ನ 1.30ರಿಂದ ಸಂಜೆ 5. ರವರೆಗೆ ಹಿರಿಯ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಇವರ ನಾರಾಯಣಮಂಗಲದ ಶ್ರೀನಿಧಿ ನಿಲಯದಲ್ಲಿ ಆಯೋಜಿಸಲಾಗಿದೆ.
ಸಮಾರಂಭದಲ್ಲಿ ವಿ.ಬಿ ಕುಳಮರ್ವ ಅಧ್ಯಕ್ಷತೆ ವಹಿಸುವರು. ನಿವೃತ್ತ ಶಿಕ್ಷಕ, ಕನ್ನಡ ಹೋರಾಟಗಾರ ನಾರಾಯಣ ಗಟ್ಟಿ ಕುಂಬಳೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತಾಯ ಉಪಸ್ಥಿತರಿರುವರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಬೇಕಲ ಪೋಲೀಸ್ ನಿಯಂತ್ರಣ ಕೇಂದ್ರದ ಅಧಿಕಾರಿ, ಸಾಹಿತ್ಯಾಭಿಮಾನಿ ಪರಮೇಶ್ವರ ನಾಯ್ಕ್, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮಿ ಕುಳಮರ್ವ, ಉಪಸ್ಥಿತರಿದ್ದು ಶುಭಹಾರೈಸುವರು. ಕವಿ ಹೃದಯದ ಸವಿಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ, ಸಹ ಸಂಚಾಲಕಿ ಶ್ವೇತಾ ಕಜೆ ಹಾಗೂ ಚೇತನಾ ಕುಂಬಳೆ ಉಪಸ್ಥಿತರಿರುವರು. ಈ ಸಂದರ್ಭ ಯುವ ಸಾಮಾಜಿಕ ನೇತಾರ ಮುರಳೀಧರ ಯಾದವ್ ನಾಯ್ಕಾಪು ಅವರು ವಿಶೇಷ ಉಪನ್ಯಾಸ ನೀಡುವರು. ಜೊತೆಗೆ ಯುವ ಗಮಕಿಗಳಾದ ಶ್ರದ್ದಾ ಹಾಗೂ ಮೇಧಾ ನಾಯರ್ಪಳ್ಳ ಸಹೋದರಿಯರಿಂದ ಗಮಕ ಗಾಯನ ಮತ್ತು ಬಾಲ ಪ್ರತಿಭೆ ಪೃಥ್ವಿ ಶೆಟ್ಟಿ ಕೆ. ಕಾಟುಕುಕ್ಕೆ ಅವರಿಂದ ಏಕಪಾತ್ರಾಭಿನಯ ನಡೆಯಲಿದೆ.
ಬಳಿಕ ನಡೆಯಲಿರುವ ದಸರಾ ಕವಿಗೋಷ್ಠಿಯಲ್ಲಿ ಕವಯಿತ್ರಿ, ಶಿಕ್ಷಕಿ ಪರಿಣಿತ ರವಿ ಎಡನಾಡು ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಸತ್ಯವತಿ ಕೊಳಚಪ್ಪು ಚಾಲನೆ ನೀಡುವರು. ಜಿಲ್ಲೆಯ ಹಿರಿಯ-ಕಿರಿಯ ಸಾಹಿತಿಗಳು ಭಾಗವಹಿಸುವರು.