ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮ ವಿಠಲ ಕ್ಷೇತ್ರದಲ್ಲಿ ಭತ್ತದ ತೆನೆ ಕಟ್ಟುವ ಹಬ್ಬವನ್ನು ಸಂಭ್ರಮ, ಶ್ರದ್ಧಾ, ಭಕ್ತಿಯಿಂದ ಇತ್ತೀಚೆಗೆ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಮಹಾ ನವರಾತ್ರಿ ನಾಡ ಹಬ್ಬದ ಪ್ರಾರಂಭಿಕವಾಗಿ ಶ್ರೀ ಸದಾಶಿವ ರಾಮವಿಠಲ ದೇಗುಲದಲ್ಲಿ ಪ್ರಾತ:ಕಾಲ ಉಷಾಪೂಜೆ, ಬಳಿಕ ಶ್ರೀ ಕ್ಷೇತ್ರದ ಮೊಕ್ತೇಸರ, ಪವಿತ್ರಪಾಣಿ ವೇದಮೂರ್ತಿ ಎನ್.ವಾಸುದೇವ ಭಟ್ ಅವರ ನೇತೃತ್ವದಲ್ಲಿ ವಿ.ಶಿವರಾಜ್ ಅವರೊಡಗೂಡಿ ಭಗವದ್ಭಕ್ತ ಸಮೂಹದೊಂದಿಗೆ ತೆನೆ ಕಟ್ಟುವ ಹಬ್ಬ ನಡೆಯಿತು.