ಮಂಜೇಶ್ವರ: ವಿಶ್ವ ಶಿಲ್ಪ ಸಂಘ ಕೊಯಂಬತ್ತೂರು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಕನ್ನಡ ಸಂಸ್ಕøತಿ ವೈಭವ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಯಕ್ಷ ಸಂಭ್ರಮ ಕಾರ್ಯಕ್ರಮ ಕೊಯಂಬುತ್ತೂರಿನ ಅಶೋಕ ನಗರದಲ್ಲಿರುವ ಆರ್.ಟಿ.ಎಂ. ತಿರುಮಣ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಚಿತ್ರ ಕಲಾವಿದ ಮನೋಹರ ಆಚಾರ್ಯ ಬೆಂಗಳೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ದೇವಾಲಯ ಶಿಲ್ಪ ತೌಲನಿಕ ನೋಟ ಎಂಬ ವಿಷಯದಲ್ಲಿ ವಿಚಾರಗೋಷ್ಟಿ ನಡೆಯಿತು. ಕಾರ್ಯಕ್ರಮವನ್ನು ವಾಸ್ತು ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ ನೆರವೇರಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಚಿತ್ರ ಕಲಾವಿದರಾದ ಮನೋಹರ ಆಚಾರ್ಯ ಬೆಂಗಳೂರು, ಕರಣ್ ಆಚಾರ್ಯ ಬೆಂಗಳೂರು, ಪ್ರವೀಣಾ ದಯಾನಂದ ಆಚಾರ್ಯ ಬೀರಿ ಕೋಟೆಕ್ಕಾರ್, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೊಸಂಗಡಿ ಉಪಸ್ಥಿತರಿದ್ದು ಚರ್ಚಾಗೋಷ್ಟಿಯಲ್ಲಿ ಪಾಲ್ಗೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವ ಶಿಲ್ಪ ಸಂಘದ ಅಧ್ಯಕ್ಷ ಯೋಗೇಶ್ ವಿ.ಆಚಾರ್ಯ ವಹಿಸಿದ್ದರು. ಸಂಘದ ಕಾರ್ಯದರ್ಶಿ ಕೆ.ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿ, ಬಬಿತಾ ಸತೀಶ್ ಆಚಾರ್ಯ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ವಿಶ್ವ ಕಲಾ ಸಂಘದ ಹರಿಶ್ಚಂದ್ರ ಆಚಾರ್ಯ ಕೊಯಂಬತ್ತೂರು ವಂದಿಸಿದರು.
ಬಳಿಕ ಪುರೋಹಿತ ಧರ್ಮೇಂದ್ರ ಆಚಾರ್ಯ ಮಧೂರು ಅವರ ಪೌರೋಹಿತ್ಯದಲ್ಲಿ ಶ್ರೀ ವಿಶ್ವಕರ್ಮ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಬಳಿಕ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸಹಯೋಗದೊಂದಿಗೆ ಯಕ್ಷ ಸಂಭ್ರಮದ ಉದ್ಘಾಟನೆ ನಡೆಯಿತು. ಕಾರ್ಯಕ್ರಮವನ್ನು ವಾಸ್ತು ಶಿಲ್ಪ ಸತೀಶ್ ಆಚಾರ್ಯ ಚೆಂಡೆ ನುಡಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರಿನ ರಿಜಿಸ್ಟಾರ್ ಶಿವರುದ್ರಪ್ಪ ಎಸ್.ಹೆಚ್, ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ಕೇರಳ ಸರ್ಕಾರದ ಕಾರ್ಯದರ್ಶಿ ಸಂಕಬೈಲು ಸತೀಶ್ ಅಡಪ, ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಹೊಸಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.
ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ಯಕ್ಷ ಬಳಗ ಹೊಸಂಗಡಿ ಇವರಿಂದ `ಅಂಗಧ ಸಂಧಾನ' ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಮಹೇಶ್ ಕನ್ಯಾಡಿ, ಚೆಂಡೆ ಕ್ಷಿತಿಕಂಠ ಭಟ್ ಉಜಿರೆ, ಮದ್ದಳೆ ಕುಸುಮೋಧರ ಮುಡಿಪು, ಚಕ್ರತಾಳ ಬಾಲಸುಬ್ರಹ್ಮಣ್ಯದಾಸ್ ಮುಡಿಪು, ಅರ್ಥದಾರಿಗಳಾಗಿ ಅಂಗಧ-ದಿನೇಶ್ ಶೆಟ್ಟಿ ಕಾವಳಕಟ್ಟೆ, ಪ್ರಹಸ್ತ-ಸದಾಶಿವ ಆಳ್ವ ತಲಪಾಡಿ, ರಾವಣ-ನಾಗರಾಜ ಪದಕಣ್ಣಾಯ ಮೂಡಂಬೈಲು, ಹನುಮಂತ-ಸಂಕಬೈಲು ಸತೀಶ ಅಡಪ ಸಹಕರಿಸಿದರು. ಬಳಿಕ ಭಾರತೀ ಕಲಾ ಆಟ್ರ್ಸ್ ಹೂ ಹಾಕುವ ಕಲ್ಲು ಇವರಿಂದ `ಜಾಂಭವತಿ ಕಲ್ಯಾಣ' ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಿತು. ಹಿಮ್ಮೇಳದಲ್ಲಿ ಮಹೇಶ್ ಕನ್ಯಾಡಿ. ಕ್ಷಿತಿಕಂಠ ಭಟ್ ಉಜಿರೆ, ಕುಸುಮೋಧರ ಮುಡಿಪು, ಬಾಲಸುಬ್ರಹ್ಮಣ್ಯದಾಸ್ ಮುಡಿಪು, ಮುಮ್ಮೇಳದಲ್ಲಿ ಜಾಂಬವಂತನಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆ, ಪ್ರಸೇನನಾಗಿ ಅಶ್ವಥ್ ಮಂಜನಾಡಿ, ಶ್ರೀಕೃಷ್ಣನಾಗಿ ಹೇಮರಾಜ್ ಕ್ಯೊಲ, ವೇಷ ಭೂಷಣದಲ್ಲಿ ರಾಘವದಾಸ್ ಹೂಹಾಕುವ ಕಲ್ಲು ಸಹಕರಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.