HEALTH TIPS

ದಾಸ-ಭಾವ-ಗಾನ-ಕುಂಚ-ನಾಟ್ಯ-ಕುಣಿತ -ಭಜನಾ ವೈವಿಧ್ಯಗಳ ವಿಶೇಷ ಕಾರ್ಯಕ್ರಮ

     
     ಪೆರ್ಲ: ಕಬಕ ಶ್ರೀ ಮಹಾದೇವಿ ದೇವಸ್ಥಾನದಲ್ಲಿ 50ನೇ ನವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ಮಹಾದೇವಿ ಯುವತಿ ಮಂಡಳ ಮತ್ತು ಭಜನಾ ಮಹಿಳಾ ಭಜನಾ ಮಂಡಳಿ ಕಬಕ ಇದರ ಪ್ರಾಯೋಜಕತ್ವದಲ್ಲಿ ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪ್ರಸ್ತುತಪಡಿಸಿದ Áಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರ ನಿರ್ದೇಶನದಲ್ಲಿ ನುಡಿ ವಿಶ್ಲೇಷಣೆಯೊಂದಿಗೆ ದಾಸ-ಭಾವ-ಗಾನ-ಕುಂಚ -ನಾಟ್ಯ-ಕುಣಿತ ಭಜನಾ ವೈವಿಧ್ಯಗಳ ವಿಶೇಷ ಕಾರ್ಯಕ್ರಮ ನಡೆಯಿತು.
    ಭಕ್ತಿಯ ಅಲೆಯಲ್ಲಿ ಭಾವ, ನಾದ, ನೃತ್ಯ, ಕುಂಚ, ಕುಣಿತ ಭಜನೆ ಒಂದೇ ವೇದಿಕೆಯಲ್ಲಿ ಅನಾವರಣಗೊಳ್ಳುತ್ತಿರುವುದು ಇದೇ ಮೊದಲಾದರೂ ಎಡರು ತೊಡರುಗಳು ಕಾಣದೇ ಒಟ್ಟಾರೆ ಕಾರ್ಯಕ್ರಮ ವೀಕ್ಷಕರಿಗೆ ಹೊಸತನದ ರಸದೌತಣ ಉಣಬಡಿಸಿತು.
     ರಾಮಕೃಷ್ಣ ಕಾಟುಕುಕ್ಕೆ ಅವರ ನುಡಿ ವಿಶ್ಲೇಷಣೆಗೆ ಹೊಂದಿಕೊಂಡಿರುವ ಹಾಡು, ಗಾಯಕರು ಹಾಡುವ ಹಾಡಿಗೆ ಹೊಂದಿಕೊಂಡ ಕುಂಚ, ನಾಟ್ಯಗಳು ವೇದಿಕೆಗೆ ಹೊಸ ಕಂಪು ಹೊಸ ಭಾಷ್ಯ ಬರೆಯುವಲ್ಲಿ ಅರ್ಥವತ್ತಾದ ಕಾರ್ಯಕ್ರಮ ಇದಾಗಿತ್ತು. ಗಾಯಕರಾಗಿ ಕಿಶೋರ್ ಪೆರ್ಲ, ಟಿ.ವಿ.ಗಿರಿ ಮಂಗಳೂರು,  ಅಕ್ಷತಾ ತಮ್ಮದೇ ರೀತಿಯಲ್ಲಿ ಮೆರುಗು ನೀಡಿದರೆ ಹಾಡಿನ ಭಾವಕ್ಕೆ ಸರಿಯಾದ ಕುಂಚ ಬಿಡಿಸುವಲ್ಲಿ ಅದ್ಭುತ ಕುಂಚ ಕಲಾವಿದ ಯೋಗೀಶ್ ಪಾಣಾಜೆ ಸಭಿಕರ ಗಮನಸೆಳೆಯುವಲ್ಲಿ ಯಶಸ್ವಿಯಾದರು. ನಾದ ಭಾವಗಳ ಸಮಾಗಮದೊಂದಿಗೆ ನಾಟ್ಯದ ಸೊಬಗು ಇನ್ನಷ್ಟು ವೇದಿಕೆಗೆ ವಿಶೇಷ ಕಳೆ ತಂದುಕೊಡಲು ಕಾರಣರಾದ ಕಾಟುಕುಕ್ಕೆಯ ಬಾಲ ಕಲಾವಿದೆಯರಾದ ಶ್ರಾವಣಿ ಕಾಟುಕುಕ್ಕೆ, ಕವನ ಕಾಟುಕುಕ್ಕೆ, ಅವನಿಕಾ ಶೆಟ್ಟಿ ಮಾಯಿಲೆಂಗಿ, ಅವನಿ ಶೆಟ್ಟಿ ದಂಬೆಕಾನ ಮತ್ತು ತಸ್ಮೈ ಶೆಟ್ಟಿ ಸೂರ್ಡೇಲು ಕಾರಣರಾದರು.
     ಕುಣಿತ  ಭಜನೆಯಲ್ಲಿ ಧರ್ಮಸ್ಥಳ ಭಜನಾ ಕಮ್ಮಟದಲ್ಲಿ ತರಬೇತಿಕೊಂಡ ಕನ್ಯಾನ ಸಮೀಪದ ಕುಂಟ್ರಕಲಾ ಶ್ರೀ ಮಹಮ್ಮಾಯಿ ಭಜನಾ ಮಂಡಳಿಯ ಯುವ ಉತ್ಸಾಹಿ ತರುಣರ ಕುಣಿತ ಭಜನೆಯು ಇದೇ ಪ್ರಥಮ ಬಾರಿಗೆ ಸಾಂಸ್ಕøತಿಕ ವೇದಿಕೆಯಲ್ಲಿ ಪ್ರದರ್ಶನಗೊಳ್ಳುವ ಮೂಲಕ ಭಜನೆಗೆ ವಿಶೇಷ ಮೆರುಗು ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries