HEALTH TIPS

ಕನ್ನಡ ನೆಲದ ಸಂಪದ್ಭರಿತ ಕಲೆ ಯಕ್ಷಗಾನ: ವಿದ್ಯಾಗಣೇಶ್ ಅಣಂಗೂರು

        ಬದಿಯಡ್ಕ: ಶ್ರೀಮಂತ ಸಂಸ್ಕøತಿಯ ಭಾಗವಾಗಿರುವ ಯಕ್ಷಗಾನ ಕನ್ನಡ ನೆಲದ ಸಂಪದ್ಭರಿತ ಕಲೆ. ಇದು ಹಲವು ಕಲೆಗಳ ಸಮ್ಮಿಲನವಾಗಿದೆ. ಮಾತ್ರವಲ್ಲದೆ ಸಂಸ್ಕಾರ, ಭಾಷಾ ಶುದ್ಧತೆ, ಏಕಾಗ್ರತೆಯೊಂದಿಗೆ ಪೌರಾಣಿಕ, ಐತಿಹಾಸಿಕ ವಿಷಯಗಳ ಮೇಲೆ ಬೆಳಕುಚೆಲ್ಲಿ ಅದನ್ನು ಪ್ರಚುರಪಡಿಸುವ ಕಾರ್ಯವನ್ನೂ ಮಾಡುತ್ತದೆ  ಎಂದು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಕಾರ್ಯದರ್ಶಿ, ಪತ್ರಕರ್ತೆ ವಿದ್ಯಾಗಣೇಶ್ ಅಣಂಗೂರು  ಅಭಿಪ್ರಾಯ ಪಟ್ಟರು.
       ಅವರು ಕೊಲ್ಲಂಗಾನ ಶ್ರೀನಿಲಯ ಶ್ರೀ ದುರ್ಗಾಪರಮೇಶ್ವರಿ ಸನ್ನಿಯಲ್ಲಿ ನವರಾತ್ರಿ ಮಹೋತ್ಸವ ಹಾಗೂ ಶ್ರೀ ಸುಬ್ರಹ್ಮಣ್ಯ ಯಕ್ಷಗಾನ ಕಲಾ ಸಂಘದ 31ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾದ ಯಕ್ಷ ದಶ ವೈಭವದ ಗೌರವಾರ್ಪಣಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
      ನಿರ್ವಹಣೆ ಮತ್ತಿತರ ಸಮಸ್ಯೆಗಳ ನಡುವೆ ಮೇಳಗಳು ಪರದೆಯ ಹಿಂದೆ ಸರಿಯುತ್ತಿರುವ ಈ ಕಾಲಘಟ್ಟದಲ್ಲೂ ಯಕ್ಷಗಾನದ ಮೇಲಿನ ಅಪಾರವಾದ ಗೌರವ ಹಾಗೂ ಪ್ರೋತ್ಸಾಹಿಸುವ ಸನ್ಮನಸಿನಿಂದ ಬ್ರಹ್ಮಶ್ರೀ ತಂತ್ರಿ ಗಣಾರಾಜ ಉಪಾಧ್ಯಾಯರು ಕೊಲ್ಲಂಗಾನ ಮೇಳವನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ. ಮಾತ್ರವಲ್ಲದೆ ಯಕ್ಷ ದಶ ವೈಭವದ ಮೂಲಕ ನೂರಾರು ಕಲಾವಿದರಿಗೆ ತಾಯಿಯ ಸನ್ನಿಧಿಯಲ್ಲಿ ಅವಕಾಶವನ್ನೂ ನೀಡುವುದರೊಂದಿಗೆ ಯಕ್ಷಗಾನ ಕ್ಷೇತ್ರದ ಸಾಧಕರನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಗೌರವಿಸುತ್ತಿರುವುದು ಮಾದರಿ ಕಾರ್ಯ ಎಂದರು.
      ಗಣಾಧಿರಾಜ ಉಪಾಧ್ಯಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಅಭೆಯಲ್ಲಿ ಸಂತೋಷ್ ಕುಮಾರ್ ಕೊಲ್ಲಂಗಾನ,  ಸುಂದರ್ ಶೆಟ್ಟಿ ಮಾನ್ಯ ಉಪಸ್ಥಿತರಿದ್ದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಯಕ್ಷ ಕಲಾ ಸಾಧಕರಾದ ಶೇಖರ ಮಣಿಯಾಣಿ ಸುಳ್ಯ, ಯಕ್ಷಗುರು ರಾಕೇಶ್ ರೈ ಅಡ್ಕ ಹಾಗೂ ಜಾನಪದ ಲೋಕ ಪ್ರಶಸ್ತಿ ಪುರಸ್ಕøತ ಯಕ್ಷಗುರು ಜಯರಾಮ ಪಾಟಾಳಿ ಪಡುಮಲೆಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಶ್ಯಾಮ್‍ಪ್ರಸಾದ್ ಮಾನ್ಯ ಆವರನ್ನು ಆಭಿನಂದಿಸಲಾಯಿತು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries