ಪೆರ್ಲ: ಮೈಸೂರು ವಿಶ್ವವಿದ್ಯಾನಿಲಯದಿಂದ Genetics and Genomics ಎಂಬ ವಿಷಯದಲ್ಲಿ ಶ್ರೀವಿದ್ಯಾ ಪರ್ತಜೆ ಇವರು ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕ ಮತ್ತು ಪ್ರಥಮ ರಾಂಕ್ ನೊಂದಿಗೆ ಪಡೆದಿದ್ದು INSPIRE Fellowship ಅರ್ಹತೆ ಮತ್ತು KSET ಗಳಿಸಿದ್ದಾಳೆ.
ಶ್ರೀ ವಿದ್ಯಾ ಪರ್ತಜೆ ಇವರು ಮುಳ್ಳೇರಿಯಾ ಹವ್ಯಕ ಮಂಡಲ ಎಣ್ಮಕಜೆ ಹವ್ಯಕ ವಲಯದ ನಿಕಟ ಪೂರ್ವ ಅಧ್ಯಕ್ಷರಾದ ಶಿವಪ್ರಸಾದ ವರ್ಮುಡಿ ಹಾಗು ಶೈಲಜಾಕುಮಾರಿ ದಂಪತಿ ಪುತ್ರಿ.
ಗಿರಿನಗರದ ರಾಮಾಶ್ರಮದಲ್ಲಿ ಅ.28 ರಂದು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಾಹಾಸ್ವಾಮಿಗಳ ಅನುಗ್ರಹಪೂರಕ ವಿಶೇಷ ಪುರಸ್ಕಾರಕ್ಕೆ ಪಾತ್ರರಾದರು.